ಸರ್ವರ ಶ್ರೇಯೋಭಿವೃದ್ಧಿಯೇ ಗುರುಪೀಠದ ಧ್ಯೇಯ: ರಂಭಾಪುರಿ ಶ್ರೀಗಳು

0
Ishtalinga Mahapuja on 8th day
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ವೀರಶೈವ ಧರ್ಮದಲ್ಲಿ ಪಂಚಪೀಠಗಳು ಪ್ರಾಚೀನ ಗುರುಪೀಠಗಳಾಗಿದ್ದು, ಶಿವಾದ್ವೈತ ಸಿದ್ಧಾಂತದ ಕೇಂದ್ರಗಳಾಗಿವೆ. ಧರ್ಮದ ಮೂಲ ಗಂಗೋತ್ರಿಯಂತೆ ಇವೆ. ಜಾತಿ-ಪಂಥಗಳ ಗಡಿಯನ್ನು ಮೀರಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಮರಸ್ಯ ಹುಟ್ಟು ಹಾಕುವ ರಾಷ್ಟ್ರೀಯ ಗುರುಪೀಠಗಳು ಎಂಬ ಪ್ರಖ್ಯಾತಿ ಪಂಚಪೀಠಗಳಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

Advertisement

ಶರನ್ನವರಾತ್ರಿ ಅಂಗವಾಗಿ ಅಬ್ಬಿಗೇರಿಯ ಹೊಸ ಹಿರೇಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರು ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ 8ನೇ ದಿನದ ಇಷ್ಟಲಿಂಗ ಮಹಾಪೂಜಾ ನಂತರ ಆಶೀರ್ವಚನ ನೀಡಿದರು.

ಪೃಥ್ವಿ, ಅಪ್, ತೇಜ, ವಾಯು ಮತ್ತು ಆಕಾಶವನ್ನು ಪ್ರತಿನಿಧಿಸುವ ಪಂಚಪೀಠಗಳು ವೀರ, ಸದ್ಧರ್ಮ, ವೈರಾಗ್ಯ, ಸೂರ್ಯ, ಜ್ಞಾನ ಪ್ರವೃತ್ತಿಗಳನ್ನು ಜನಮನದಲ್ಲಿ ಬೆಳೆಸುವ ಕಾರ್ಯ ಮಾಡಿವೆ. ಶ್ರೀ ರಂಭಾಪುರೀ, ಶ್ರೀ ಉಜ್ಜಯನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಹಾಗೂ ಶ್ರೀ ಕಾಶೀ ಧರ್ಮ ಪೀಠಗಳು ಮೂಲಸ್ಥಾನಗಳಾಗಿವೆ. ಈ ಗುರು ಪೀಠಗಳು ಸಂಪತ್ತು-ಶಾಂತಿ, ತ್ಯಾಗ, ವೈರಾಗ್ಯ, ನಿರ್ಮಲತೆ ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತಿದ್ದು, ಸರ್ವ ಜನಾಂಗದ ಶ್ರೇಯೋಭಿವೃದ್ಧಿ ಕಾರ್ಯವೇ ಈ ಗುರು ಪೀಠಗಳ ಪರಮ ಧ್ಯೇಯವಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ನುಡಿದರು.


Spread the love

LEAVE A REPLY

Please enter your comment!
Please enter your name here