ಮಡಿಕೇರಿ:- ರಾಜಕಾರಣಿಗಳಾಗಿ ದುಬಾರಿ ಗಿಫ್ಟ್ ತಗೊಳ್ಳೋದು ತಪ್ಪು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
Advertisement
ಡಿಸಿಎಂ ಡಿಕೆಶಿ ಕಾರ್ಟಿಯರ್ ವಾಚ್ ವಿಚಾರಕ್ಕೆ ನಗರದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ರೂ ಅಫಿಡವಿಟ್‌ನಲ್ಲಿ ತೋರಿಸಿದ್ರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರ ವಾಚ್ ವಿಚಾರ ಬಂದಾಗ, ಯಾರೋ ಗಿಫ್ಟ್ ಆಗಿ ಕೊಟ್ಟಿದ್ರು ಅಂತ ಹೇಳಿದ್ರು, ರಾಜಕಾರಣಿಗಳಾಗಿ ಇಂತಹ ದುಬಾರಿ ಗಿಫ್ಟ್ ತಗೊಳ್ಳೋದು ತಪ್ಪು ಎಂದರು.
ಸಾಮಾನ್ಯವಾಗಿ ಗಿಫ್ಟ್ ಕೊಟ್ಟರೆ ಏನೋ ಕೆಲಸಕ್ಕಾಗಿಯೇ ಕೊಟ್ಟಿದ್ದಾರೆ ಅನ್ನೋ ಭಾವನೆ ಬರುತ್ತೆ. ಹೀಗಾಗಿ ನಾವು ಚುನಾಬಣೆ ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಬಗ್ಗೆ ಡಿಕ್ಲೇರ್ ಮಾಡೋದು ಒಳ್ಳೆಯದು ಎಂದು ಹೇಳಿದ್ದಾರೆ.


