ಬೆಂಗಳೂರು:- ಡಿ-ಕಂಪನಿಗೆ ಡುಬಾಕ್ ಅಂತ ಕ್ಲಾಸ್ ತೆಗೆದುಕೊಂಡಿರುವ ಒಳ್ಳೆ ಹುಡುಗ ಪ್ರಥಮ್, ದರ್ಶನ್ ಫ್ಯಾನ್ಸ್‌ಗೆ ಬೆಂಡೆತ್ತಿದ್ದಾರೆ.
ಇತ್ತೀಚೆಗೆ ನಟ ಪ್ರಥಮ್ ಅವರ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಯತ್ನ ಮಾಡಲಾಯಿತು ಎಂಬ ಆರೋಪ ಕೇಳಿಬಂದಿದೆ. ಅದರಿಂದಾಗಿ ವಿವಾದ ಸೃಷ್ಟಿ ಆಗಿದೆ. ಈ ಕುರಿತು ದರ್ಶನ್ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿರುಗೇಟು ನೀಡಲಾಗಿದೆ. ಇದಕ್ಕೆ ಪ್ರಥಮ್ ಕೂಡ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಡಿ-ಕಂಪನಿ ಹೇಳಿದ್ದೇನು?
‘ಪ್ರಥಮ್ ಮೇಲೆ ಹಲ್ಲೆ ಪ್ರಕರಣದ ಸತ್ಯ ಹೊರ ಬಂದಿದೆ. ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ ಖಾರ ಬನ್ ತಿಂದ ಪ್ರಕರಣವಿದು’ ಎಂದು ದರ್ಶನ್ ಫ್ಯಾನ್ಸ್ ಬರೆದುಕೊಂಡಿದ್ದಾರೆ.
ಪ್ರಥಮ್ ತಿರುಗೇಟು!
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರುವ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ, ಇಂಟರ್‌ಪೋಲ್, ಸೈಬರ್ ಕ್ರೈಮ್, ಇಂಟಲಿಜೆನ್ಸ್ ಇವೆಲ್ಲಾ ದೇಶದ ಬಹಳ ದೊಡ್ಡ ಬೇಹುಗಾರಿಗೆ ಕಂಪನಿಗಳು. ಇವನ್ನೆಲ್ಲಾ ಮುಚ್ಚಿ ಎಲ್ಲಾ ಕೇಸ್‌ಗಳನ್ನು ಆ ಡಿ-ಕಂಪನಿ, ಡುಬಾಕ್ ಕಂಪನಿಗೆ ಕೊಡಿ. ಪರಿಹರಿಸ್ತಾರೆ. ಅವತ್ತು ದೊಡ್ಡಬಳ್ಳಾಪುರದಲ್ಲಿ ನಾನು ರೌಡಿಗಳ ಬಳಿ ಚಿಪ್ಸು-ಪಪ್ಸ್ ತಿನ್ನೋಕೆ ಹೋಗಿದ್ನಂತೆ. ಸುಮ್ನೆ ತಪ್ಪು ಮಾಹಿತಿ ಹಬ್ಬಿಸಬೇಡಿ. ಮೊದಲು ಶಿಕ್ಷಣ ಮುಖ್ಯ. ಸುಮ್ನಿದ್ದು ನಿಮ್ಮ ಅಮ್ಮ-ಅಪ್ಪನಿಗೆ ದುಡಿದು ತಂದು ಸಾಕಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಡುಬಾಕ್ ಕಂಪನಿಯ ಇಂಟಲಿಜೆನ್ಸ್ ಪ್ರಕಾರ ಇನ್ವೇಸ್ಟಿಕೇಷನ್ ಮಾಡಿ ಹೇಳಿದ್ರಂತೆ ಅವತ್ತು ಹಲ್ಲೆ ಮಾಡೋಕೆ ಚಿಪ್ಸು-ಪಪ್ಸು ಮ್ಯಾಟರಂತೆ. ಜೊತೆಗೆ ಅಲ್ಲಿರುವವರು ದರ್ಶನ್ ಫ್ಯಾನ್ಸ್ ಅಲ್ವಂತೆ ಅಂತ ಹೇಳ್ತಿದ್ದಾರೆ. ಸುಮ್ಮನೇ ಡಿ-ಕಂಪನಿ ಅಂತ ಹೆಸರಿಟ್ಕೊಂಡು ಪುಂಡಾಟ ಮಾಡ್ತಾರೆ. ಅಲ್ಲಿ ಏನಾಯ್ತು ಅಂತ ಎಸ್‌ಪಿಯವರು ಹೇಳ್ತಾರೆ. ನಿಮಗೆ ಒಂದು ಚೂರಾದರೂ ಬುದ್ಧಿ ಇದ್ರೆ, ತಪ್ಪು ಮ್ಯಾಟರ್ ಹಬ್ಬಿಸೋದು ಬಿಡಿ. ನಾನು ಅಲ್ಲೇನೂ ಚಿಪ್ಸು ತಿನ್ನಕ್ಕೆ ಹೋಗಿರಲಿಲ್ಲ ಎಂದು ಸೆಲ್ಫಿ ವಿಡಿಯೋ ಮಾಡಿ ಟಾಂಗ್ ಕೊಟ್ಟಿದ್ದಾರೆ.