ಗದಗ:- ಕರ್ನಾಟಕದಲ್ಲಿ ಪವರ್ ಶೇರಿಂಗ್ ವಿಚಾರ ಚರ್ಚೆಯಲ್ಲಿರುವಾಗಲೇ ಸಿಎಂ ಬದಲಾವಣೆ ಬಗ್ಗೆ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಗದಗನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರಿಂದ ಅಧಿಕಾರ ಕಿತ್ತುಕೊಳ್ಳೋಕೆ ಆಗಲ್ಲ, ಸಿದ್ದರಾಮಯ್ಯ ಪೂರ್ಣವಾಧಿ ಮುಗಿಸುತ್ತಾರೆ. ಹಾಲುಮತ ಸಮಾಜ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗೋದಿಲ್ಲ. ಇವತ್ತಿನ ರಾಜಕೀಯ ಚಿಂತನೆ ಮಾಡೋದಾದ್ರೆ ಈ ಮುಖ್ಯಮಂತ್ರಿ ಇರೋವರೆಗೂ ಕಿತ್ತುಕೊಳ್ಳೋದು ಕಷ್ಟ. ನಾವು ಹೇಳಿದ್ದು ಕೇವಲ ವ್ಯಕ್ತಿಯ ಚಿಂತನೆ ಅಲ್ಲ, ಸಮಗ್ರ ಭವಿಷ್ಯದ ಚಿಂತನೆ ಎಂದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ನಮಗೆ ಇದೆ. ಬದಲಾವಣೆ ಕುರಿತು, ಯುಗಾದಿ ನಂತರ ಅದರ ಬಗ್ಗೆ ಹೇಳಬಹುದು. ಡಿಕೆ ಶಿವಕುಮಾರ್ ಒಕ್ಕಲಿಗರು. ಒಕ್ಕಲಿಗರು ಅನ್ನದಾತರು, ಅವರನ್ನು ಇಡೀ ಜಗತ್ತು ಮರೆಯೋದಿಲ್ಲ. ಇದಕ್ಕೆ ಜಾತಿ ಲೇಪನ ಹಚ್ಚುವುದು ಬೇಡ. ಹಾಗೆ ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ನಮಗೆ ದುರಾಭಿಮಾನ ಇಲ್ಲ. ಅವರ ಬಗ್ಗೆ ಅಭಿಮಾನ ಇದೆ, ಮೊದಲಿನಿಂದ ಹೋರಾಟ ಮಾಡಿಕೊಂಡು ಬಂದಿದ್ದಾನೆ ಎಂದರು. ಇನ್ನೂ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸುನಾಮಿ ಆಗುವ ಲಕ್ಷಣಗಳು ಬಹಳ ಇವೆ ಎಂದರು.
ಇನ್ನೂ ಈ ವರ್ಷ ಕರ್ನಾಟಕಕ್ಕೆ ಮಳೆ ಬೆಳೆ ತೊಂದರೆ ಇಲ್ಲ, ಶುಭಯೋಗ ಇದೆ. ಆದರೆ ಪ್ರಾಕೃತಿಕ ದೋಷಗಳು ಬಹಳ ಇವೆ. ಭೂಕಂಪ, ಭೂಮಿ ಸುನಾಮಿ, ವಾಯು ಸುನಾಮಿ ಆಗೋದು. ಕಳೆದ ಬಾರಿಗಿಂತ ಈ ಬಾರಿ ಪ್ರಾಕೃತಿಕ ದೋಷಗಳು ಹೆಚ್ಚಿವೆ. ಬಿಸಿಲ ಧಗೆ ಬಹಳ ಆಗತ್ತೆ, ಹಿಮಪಾತ ಆಗುತ್ತೆ. ಪ್ರಾಕೃತಿಕ ದೋಷವೇ ಮತ್ತೊಂದು ಕರೋನಾ ಆಗಿ ಬರತ್ತೆ ಈ ಬಾರಿ, ಬರೋ ಸಂವತ್ಸರ ಕೆಟ್ಡದೇನಲ್ಲ, ಚೆನ್ನಾಗಿದೆ ಎಂದರು.



