ಬೆಳಗಾವಿ: ಬಿಜೆಪಿ ನಾಯಕರು ಪದೇ ಪದೇ ಮಾತನಾಡುವುದು ನೋಡಿ ಅಸಹ್ಯ ಎನಿಸುತ್ತಿದೆ ಎಂದು ತಮ್ಮದೇ ನಾಯಕರ ವಿರುದ್ಧ ರಮೇಶ್ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಂತರಿಕ ಸಮಸ್ಯೆ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಅಲ್ಲಿ ಯಾರು ಏಕನಾಥ ಸಿಂಧೆ, ಅಜಿತ್ ಪವಾರ್ ಆಗಲ್ಲ. ಬದಲಾಗಿ ಸರ್ಕಾರ ಇನ್ನೂ ಮುಂದುವರಿದ್ರೆ ನಮಗೆ ಅನುಕೂಲ ಆಗಲಿದೆ. ನಾವು ವಿರೋಧ ಪಕ್ಷದ ಕೆಲಸವನ್ನ ಸರಿಯಾಗಿ ಮಾಡಬೇಕಿದೆ ಎಂದು ಹೇಳಿದರು.
ಇನ್ನೂ ಜೆಸಿಬಿ ಹೊಸ ಪಕ್ಷ ಕಟ್ಟುವ ಬಗ್ಗೆ ಯತ್ನಾಳ್ ಹೇಳಿಕೆಗೆ, ಈ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ನಾವು ಬದ್ಧ. ನಾವು ಬಿಜೆಪಿಯಲ್ಲೇ ಮುಂದುವರಿಯುತ್ತೇವೆ. ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಯತ್ನಾಳ್ ಅವರನ್ನು ನಮ್ಮ ಪಕ್ಷಕ್ಕೆ ವಾಪಸ್ ಕರೆ ತರುವ ಪ್ರಯತ್ನ ಮಾಡುವೆ.
ಏಕೆಂದರೆ ಉಚ್ಛಾಟನೆ ಬಳಿಕ ಯತ್ನಾಳ್ ಮತ್ತು ವಿಜಯೇಂದ್ರ ಅವರನ್ನು ಹೋಲಿಕೆ ಮಾಡಿ ನೋಡಿ. ರಾಜ್ಯದಲ್ಲಿ ಲಿಂಗಾಯತ ಮತ್ತು ಹಿಂದೂ ನಾಯಕನಾಗಿ ಯತ್ನಾಳ್ ಎತ್ತರಕ್ಕೆ ಬೆಳೆದಿದ್ದಾರೆ. ವಿಜಯೇಂದ್ರ ಕೆಳಗಿಳಿದಿದ್ದಾರೆ. ಇದು ಎಲ್ಲರೂ ಒಪ್ಪುವ ಮಾತು. ಯತ್ನಾಳ್ ನಾಯಕತ್ವ ಇಂದಿನ ಬಿಜೆಪಿಗೆ ಅನಿವಾರ್ಯ ಎಂದು ರಮೇಶ ಜಾರಕಿಹೊಳಿ ಹೇಳಿದರು.


