ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಲ್ಲಿನ ಬ್ರಾಹ್ಮಣ ಸಂಘದ ವತಿಯಿಂದ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿಯನ್ನುಇತ್ತೀಚೆಗೆ ಮುಳಗುಂದದ ನಗರೇಶ್ವರ ದೇವಸ್ಥಾನದಲ್ಲಿ ಬಹುವಿಜೃಂಬಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಶಾಖಾ ಘಟಕದ ಅಧ್ಯಕ್ಷರಾಗಿ ಗೋವಿಂದರಾವ್ ಇಂಗಳಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಪಾದನಾಯ್ಕ ಶಂ.ತಮ್ಮಣ್ಣವರ ಇವರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರನ್ನಾಗಿ ಸುಮತಿ ಗುಡಿ, ಉಪಾಧ್ಯಕ್ಷರನ್ನಾಗಿ ಲತಾ ಪ್ರ. ಡಂಬಳ, ಕಾರ್ಯದರ್ಶಿಯನ್ನಾಗಿ ಭಾಗ್ಯಲಕ್ಷ್ಮಿ ಗೋ. ಇಂಗಳಗಿ, ಖಜಾಂಚಿಯಾಗಿ ವಿದ್ಯಾ ಕುರಂದವಾಡ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೋಪಾಲ ಪ್ರಮೋದ ಡಂಬಳ, ಘಟಕದ ಪದಾಧಿಕಾರಿಗಳು, ಗದಗ ಜಿಲ್ಲಾ ವಿಪ್ರ ಮಹಿಳಾ ಘಟಕದ ಅಧ್ಯಕ್ಷರಾದ ಕಲಾವತಿ ಅಲಬೂರ, ಮಹಿಳಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.
Advertisement