ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಮೇ 18ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮೂರು ದಿನಗಳ ಕಾಲ ಸಾಂಪ್ರದಾಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಾತ್ರೆಯ ನಿಮಿತ್ತ ಮೇ. 17ರಂದು ಸಂಜೆ 7 ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಶ್ರೀ ಲಕ್ಷ್ಮಿದೇವರ ಪೂಜೆ ರಥದ ಬಳಿ ನೆರವೇರಲಿದೆ. ಇತಿಹಾಸ ಪ್ರಸಿದ್ಧ ದೇವಸ್ಥಾನದ ರಥೋತ್ಸವವು ವೈಶಾಖ ಶುದ್ಧ ದಶಮಿ, ಮೇ. 18ರ ಸಂಜೆ 5.30 ಗಂಟೆಗೆ ಸಕಲ ವಾದ್ಯ ವೈಭವದೊಂದಿಗೆ ನಡೆಯಲಿದೆ. ಮೇ. 19ರಂದು ಸಂಜೆ 5.30 ಗಂಟೆಗೆ ಕಡುಬಿನ ಕಾಳಗ ಹಾಗೂ ಮೇ. 20ರಂದು 7 ಗಂಟೆಗೆ ದೇವರ ಓಕುಳಿ ಕಾರ್ಯಕ್ರಮ ಜರುಗಲಿದೆ. ರಥೋತ್ಸವದ ನಿಮಿತ್ತ ಮೇ. 18ರ ಮುಂಜಾನೆ ರಥಾಂಗ ಹೋಮ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಮೇ. 18ರಿಂದ 20ರವರೆಗೆ ಪ್ರಸಾದ ಸೇವೆ ನಡೆಯಲಿದೆ. ಅಲ್ಲದೆ ಶ್ರೀ ಸೋಮೇಶ್ವರನಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ರುದ್ರಾಭೀಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸೇವಾಕರ್ತರು ಅರ್ಚಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.