ಇಂದು ಜವಾಹರಲಾಲ್ ನೆಹರೂ ಜನ್ಮದಿನಾಚರಣೆ: ಪ್ರಧಾನಿ ಮೋದಿಯಿಂದ ಗೌರವ ನಮನ

0
Spread the love

ನವದೆಹಲಿ: ಇಂದು ನವೆಂಬರ್ 14, ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕ, ಭಾರತದ ಪ್ರಥಮ ಪ್ರಧಾನ ಮಂತ್ರಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು ಅವರ 125ನೇ ಜನ್ಮ ದಿನ. ಈ ದಿನವನ್ನು ಭಾರತದಲ್ಲಿ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.

Advertisement

ಈ ಕುರಿತು ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, “ಇಂದು ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ 125ನೇ ಜಯಂತಿ. ಅವರಿಗೆ ನನ್ನ ನಮನಗಳು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪಂಡಿತ್ ನೆಹರು ಅವರ ಪ್ರಯತ್ನಗಳು ಮತ್ತು ಭಾರತದ ಮೊದಲ ಪ್ರಧಾನಿಯಾಗಿ ಅವರ ಪಾತ್ರವನ್ನು ನಾವು ಸ್ಮರಿಸುತ್ತೇವೆ” ಎಂದು ತಿಳಿಸಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಮಾರ್ಗದರ್ಶನದ ಅಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದವರು ಪಂಡಿತ್​ ಜವಹರ ​ಲಾಲ್​ ನೆಹರು​. 1947 ರಿಂದ 1964ವರೆಗೆ ಅವರು ಕೊನೆಯುಸಿರೆಳೆಯುವವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here