ಆಧ್ಯಾತ್ಮಿಕ ಪ್ರವಚನ ಇಂದಿನಿಂದ

0
Jayantyutsava of Mrityunjaya Mahaswamy
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಇಲ್ಲಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಿರಂಜನ ಜ್ಯೋತಿ ಮ.ನಿ.ಪ್ರ. ಮೃತ್ಯುಂಜಯ ಮಹಾಸ್ವಾಮಿಗಳವರ ಜಯಂತ್ಯುತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವು ನ.10ರಿಂದ 17ರವರೆಗೆ ಪ್ರತಿದಿನ ಸಾಯಂಕಾಲ 7ರಿಂದ 8ಗಂಟೆಯವರೆಗೆ ಜಗದ್ಗುರು ಅನ್ನದಾನೀಶ್ವರ ವಿದ್ಯಾಸಂಸ್ಥೆಯ ಕೆ.ಕೆ. ನಂದಿಕೋಲ ಪ್ರೌಢಶಾಲೆ ಮೈದಾನದಲ್ಲಿ ಪ್ರವಚನ ಮಣಕವಾಡದ, ಹಿರೇವಡ್ಡಟ್ಟಿ ಶ್ರೀಮ.ನಿ.ಪ್ರ.ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಜರುಗಲಿದೆ.

Advertisement

ನ.10ರಂದು ನಾಡೋಜ ಜಗದ್ಗುರು ಡಾ.ಅನ್ನದಾನೇಶ್ವರ ಮಹಾಸ್ವಾಮಿಗಳು ಉದ್ಘಾಟನೆ ನೆರವೇರಿಸುವರು. ಪ್ರವಚನ ಮಣಕವಾಡದ, ಹಿರೇವಡ್ಡಟ್ಟಿ ಶ್ರೀಮ.ನಿ.ಪ್ರ.ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಶ್ರೀ ಷ.ಬ್ರ.ವೀರೇಶ್ವರ ಶಿವಾಚಾರ್ಯ ಶ್ರೀ, ನೇತೃತ್ವ ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮ ತಾಯಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಎ.ಸಿ. ಚಾಕಲಬ್ಬಿ, ಡಾ.ಉಮೇಶ ಪುರದ, ಗೌಸುಸಾಬ ದೊಟಿಹಾಳ, ಮಹೇಶ ನರಿಬೋಳ, ತೋಟೆಂದ್ರಕುಮಾರ ಕರಡಕರ್, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಾಲ್ಗೊಳ್ಳುವರು.

Jayantyutsava of Mrityunjaya Mahaswamy

ನ.17ರ ಜಯಂತ್ಯುತ್ಸವ ಹಾಗೂ ಪ್ರವಚನ ಮುಕ್ತಾಯ ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಕ್ಕೆರಿ ಮಠದ ಸದಾಶಿವ ಮಹಾಸ್ವಾಮಿಗಳು, ಹುಬ್ಬಳ್ಳಿಯ ಸದ್ಗುರು ಅಭಿನವ ಸಿದ್ಧಾರೂಡ ಮಹಾಸ್ವಾಮಿಗಳು ವಹಿಸುವರು. ಸಮ್ಮುಖವನ್ನು ಮಹೇಶ್ವರ ಶಿವಾಚಾರ್ಯ ಶ್ರೀಗಳು, ಚನ್ನಬಸವ ದೇವರು, ಮಲ್ಲಿಕಾರ್ಜುನಸ್ವಾಮಿ ವಹಿಸುವರು.

ಅಧ್ಯಕ್ಷತೆಯನ್ನು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ, ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಕಳಕಪ್ಪ ಬಂಡಿ, ಶಾಸಕ ಚಂದ್ರು ಲಮಾಣಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಉದ್ಯಮಿ ಮಂಜುನಾಥ ಹರ್ಲಾಪೂರ, ರಾಜೇಶ ಹರ್ಲಾಪುರ ಮುಂತಾದವರು ಪಾಲ್ಗೊಳ್ಳುವರು. ಮಹನ್ಯಾ ಗುರು ಪಾಟೀಲ್‌ರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಜಯಂತ್ಯುತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನ.16ರಂದು ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಪ್ರಭುಶಾಂತ ಶ್ರೀಗಳು ವಹಿಸುವರು. ಅತಿಥಿಗಳಾಗಿ ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ಟಿ. ಈಶ್ವರ, ಸಂಯುಕ್ತ ಬಂಡಿ, ಶಶಿಕಲಾ ಪಾಟೀಲ್, ಶೋಭಾ ಮೇಟಿ, ಗ್ರಾ.ಪಂ ಅಧ್ಯಕ್ಷೆ ನಾಗವ್ವ ವೆಂ.ಬಳ್ಳಾರಿ, ಕೆ.ವಿ. ಹಂಚಿನಾಳ, ನಾಗೇಶ ಹುಬ್ಬಳ್ಳಿ, ಹೇಮಂತಗೌಡ ಪಾಟೀಲ್, ಆನಂದಗೌಡ ಪಾಟೀಲ್, ಡಿ.ಡಿ. ಮೋರನಾಳ, ಹೇಮಗಿರಿಷ ಹಾವಿನಾಳ, ರವಿ ಕರಿಗಾರ, ರಾಜು ಕುರಡಗಿ, ಸದಾಶಿವಯ್ಯ ಮದರಿಮಠ, ಎಸ್.ಎಚ್. ಶಿವನಗೌಡರ, ಕಿರಣ ಪ್ರಕಾಶ ಬೂಮಾ, ಶರಣಪ್ಪ ಸಾಸನೂರ, ಸುರೇಶ ನಾಯ್ಕರ, ಸೋಮರಡ್ಡಿ ನಡೂರ, ಮದರಸಾಬ ಸಿಂಗನಮಲ್ಲಿ ಪಾಲ್ಗೊಳ್ಳುವರು.


Spread the love

LEAVE A REPLY

Please enter your comment!
Please enter your name here