ವಿಜಯಸಾಕ್ಷಿ ಸುದ್ದಿ, ಗದಗ : ಜೆಡಿಎಸ್ ಪಕ್ಷದ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ದೇವಪ್ಪ ಮಲ್ಲಸಮುದ್ರ ಇವರ ಜನ್ಮದಿನವನ್ನು ಬಿಂಕದಕಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಗದಗ ಜಿಲ್ಲಾಧ್ಯಕ್ಷ ಎಂ.ವಾಯ್. ಮುಧೋಳರ ನೇತೃತ್ವದಲ್ಲಿ ಆಚರಿಸಲಾಯಿತು.
ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಕೊಪ್ಪಳ, ಹಿಂದುಳಿದ ವರ್ಗಗಳ ಅಧ್ಯಕ್ಷ ತಿಪ್ಪಣ್ಣ ಹುಡೇದ, ರೈತ ಘಟಕದ ಅಧ್ಯಕ್ಷ ಲಕ್ಷ್ಮಣ ನಾಯಕ, ಅಲ್ಪಸಂಖ್ಯಾತರ ಘಟಕದ ಕಾರ್ಯಾಧ್ಯಕ್ಷ ಶಿರಾಜ್ ಕದಡಿ, ತಾಲೂಕಾಧ್ಯಕ್ಷ ಅಬ್ದುಲರಸೂಲ ಬಳ್ಳಾರಿ, ಉಪಾಧ್ಯಕ್ಷ ರಾಜೇಸಾಬ ತಹಸೀಲ್ದಾರ, ಗಜೇಂದ್ರಗಡ ತಾಲೂಕಾಧ್ಯಕ್ಷ ಸಂಗಪ್ಪ ಎಲಬುಣಿಸಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾದಶಾಹ ಭಗವಾನ, ಮುಖಂಡರಾದ ಎಂ.ಎಸ್. ಪರ್ವತಗೌಡ್ರ, ಇಮಾಮಹುಸೇನ ಉಮಚಗಿ, ಆನಂದ ಹುಂಡಿ, ಅಲ್ತಾಫ್ ಖಾಜಿ, ಶ್ರೀನಿವಾಸ ಓಂಕಾರ ಸೇರಿದಂತೆ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



