ಬೆಟಗೇರಿಯಲ್ಲಿ ಜೋಡು ರಥೋತ್ಸವದ ಸಂಭ್ರಮ

0
betageri
default
Spread the love

ವಿಜಯಸಾಕ್ಷಿ ಸುದ್ದಿ, ಬೆಟಗೇರಿ : ಬೆಟಗೇರಿ-ನರಸಾಪೂರ ಮಧ್ಯದಲ್ಲಿರುವ ಪೂಜ್ಯ ರಂಗಾವಧೂತರ ತಪೋಭೂಮಿಯಲ್ಲಿ ಅವರಾತ್ರಿ ಅಮವಾಸ್ಯೆಯ ದಶಮಿ ದಿನವಾದ ಫೆ.೧೯ರಂದು ಪೂಜ್ಯ ವೀರಪ್ಪಜ್ಜ ಹಾಗೂ ಪೂಜ್ಯ ರಂಗಪ್ಪಜ್ಜ ಗುರು-ಶಿಷ್ಯರ ಜೋಡು ರಥೋತ್ಸವ ವಿಜೃಂಭಣೆಯಿಂದ ಜರುಗಿತು. ರಾಜ್ಯದಲ್ಲಿ ಬಹುತೇಕ ಜೋಡು ರಥೋತ್ಸವ ನಡೆಯುವುದು ಇದೊಂದೇ ಜಾತ್ರೆಯಲ್ಲಿ ಎಂಬುದು ಇನ್ನೊಂದು ವಿಶೇಷ.

Advertisement

ರಥೋತ್ಸವ ಪ್ರಾರಂಭವಾಗುತ್ತಿದ್ದಂತೆ ಮುಗಿಲುಮುಟ್ಟಿದ ನೆರೆದಿದ್ದ ಸಹಸ್ರಾರು ಸದ್ಭಕ್ತರ ಹರ್ಷೋದ್ಘಾರಗಳು ರಂಗಪ್ಪಜ್ಜನ ಜಾತ್ರೆಗೆ ವಿಶೇಷ ಆಕರ್ಷಣೆ ನೀಡಿದವು.

ರಂಗಪ್ಪಜ್ಜನ ಮಠದಲ್ಲಿ ಅಲಂಕೃತವಾಗಿ ನೂತನವಾಗಿ ಪೂಜ್ಯ ವೀರಪ್ಪಜ್ಜನ ರಥ ಸಿದ್ಧಪಡಿಸಲಾಗಿತ್ತು.

ನರಸಾಪೂರದಲ್ಲಿ ಸಿದ್ದಗೊಳಿಸಿದ್ದ ಪೂಜ್ಯ ರಂಗಪ್ಪಜ್ಜನ ತೇರು ಸಂಜೆ ೬ ಗಂಟೆಗೆ ರಂಗಪ್ಪಜ್ಜನ ಮಠ ತಲುಪಿ ವಿಲೀನಗೊಂಡಾಗ ಅಲ್ಲಿ ನೆರೆದಿದ್ದ ಸದ್ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದರು. ವಿಶಾಲವಾದ ಬಯಲಿನಲ್ಲಿ ಸದ್ಭಕ್ತರು ತಮ್ಮ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬೆಟಗೇರಿಯ ಮಿರ್ಚಿ-ಮಂಡಕ್ಕಿ, ಪುರೇ ಬಜಿ ಸೇರಿದಂತೆ ವಿವಿಧ ತಿನಿಸುಗಳನ್ನು ಸವಿದು ತಮ್ಮ ಸಂತಸ ವ್ಯಕ್ತಪಡಿಸಿದರು.

ಬೆಟಗೇರಿ ಮಂಜುನಾಥ ನಗರದ ನಾಗಲಿಂಗೇಶ್ವರ ಯುವಕ ಮಂಡಳ ಹಾಗೂ ಶಿವಾಜಿ ನಗರದ ವಿನಾಯಕ ಗೆಳೆಯರ ಬಳಗದವರು ಶ್ರದ್ಧಾ-ಭಕ್ತಿಯಿಂದ ಭಜನೆಯೊಂದಿಗೆ ರಂಗಪ್ಪಜ್ಜ ಹಾಗೂ ವೀರಪ್ಪಜ್ಜ ಗುರುಶಿಷ್ಯರ ತೇರುಗಳಿಗೆ ಪ್ರತಿ ವರ್ಷ ಬೃಹತ್ ಗಾತ್ರದ ಹೂಮಾಲೆಗಳನ್ನು ಅರ್ಪಿಸುವುದು ವಿಶೇಷವಾಗಿದೆ.

ಗದಗ-ಬೆಟಗೇರಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಮುಖಂಡರಾದ ಎಸ್.ಆರ್. ಬಸವಾ, ಗಣೇಶಸಿಂಗ್ ಬ್ಯಾಳಿ, ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರಪ್ಪ ಅರಣಿ, ರುದ್ರಪ್ಪ ಬಾದರದಿನ್ನಿ, ಭೋಜಪ್ಪ ಹೆಗ್ಗಡಿ, ಮಹದೇಹಸಾ ಮೇರವಾಡೆ, ಹೇಮಂತಗೌಡ ಬೆನಹಾಳ, ರಾಜು ಕಟಗಿ, ರಾಮಣ್ಣ ಗಡಗಿ, ಚಿದಾನಂದ ಕಾಕಿ, ಮಲ್ಲೇಶಪ್ಪ ಐಲಿ, ವಿಜಯ ಕಬಾಡಿ, ದುರ್ಗಾಸಿಂಗ್ ಕಾಟೇವಾಲ, ರಂಗಪ್ಪ ಹುಯಿಲಗೋಳ, ಅಶೋಕ ಮುಳಗುಂದ, ಗುರನಗೌಡ ಗೌಡ್ರ, ಶ್ರೀಧರ ಗೆದ್ದಣ್ಣವರ, ನೂರಕ್ಕು ಹೆಚ್ಚು ಸಾಧು-ಸಂತರು ಸೇರಿದಂತೆ ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು.

ರಂಗಾವಧೂತರ ತಪೋಭೂಮಿಯಲ್ಲಿ ನಡೆದ ಜೋಡು ರಥೋತ್ಸವಕ್ಕೆ ಸಹಕರಿಸಿದ ಸಮಸ್ತ ಸದ್ಭಕ್ತರಿಗೆ, ದಾನಿಗಳಿಗೆ, ಗದಗ-ಬೆಟಗೇರಿ ನಗರಸಭೆ, ಹಾತಲಗೇರಿ, ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪ್ರತ್ಯಕ್ಷ-ಪರೋಕ್ಷ ಸೇವೆ ಸಲ್ಲಿಸಿದವರಿಗೆ ಹಾಗೂ ವಿಶೇಷವಾಗಿ ಒಂದು ವಾರದಿಂದ ಪ್ರಸಾದ ಸೇವೆಎಯನ್ನು ಸ್ವಯಂ ಪ್ರೇರಣೆಯಿಂದ ಸಿದ್ಧಗೊಳಿಸಿದ್ದ ಚಿದಾನಂದ ಖಾಕಿ ಮುಂತಾದವರಿಗೆ ಟ್ರಸ್ಟ್ ಕಾರ್ಯದರ್ಶಿ ಗಣೇಶಸಿಂಗ್ ಬ್ಯಾಳಿ ಅಭಿನಂದನೆ ಸಲ್ಲಿಸಿದರು.

ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಗದಗ-ಬೆಟಗೇರಿ ನಗರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್, ರಂಗಾವಧೂತರ ತಪೋಭೂಮಿಯ ಸುತ್ತಮುತ್ತಲಿನ ಪ್ರದೇಶದ ಯುವಕರು ಉತ್ಸಾಹದಿಂದ ಜಾತ್ರೆಗೆ ಶ್ರಮಿಸಿ ನೀಡಿದ ಸಹಕಾರ ಅಪಾರವಾಗಿತ್ತು. ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜಾತ್ರೆಗೆ ಚಾಲನೆ ನೀಡಿ ಶುಭ ಕೋರಿದರು. ಸಾನ್ನಿಧ್ಯವನ್ನು ನಂದಿವೇರಿ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು.


Spread the love

LEAVE A REPLY

Please enter your comment!
Please enter your name here