Homecultureಸಮಾಜದ ಅಭಿವೃದ್ಧಿಗೆ ಕೈಜೋಡಿಸಿ

ಸಮಾಜದ ಅಭಿವೃದ್ಧಿಗೆ ಕೈಜೋಡಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಟಗೇರಿ : ಸಮಾಜದ ಎಲ್ಲ ಸಂಘ-ಸಂಸ್ಥೆಗಳು, ಸಮಾಜದ ಹಿರಿಯರು ಹಾಗೂ ಯುವಕರು ಕೂಡಿ ಶ್ರೀಮಠದ ಹಾಗೂ ಸಮಸ್ತ ಸಮಾಜದ ಏಳ್ಗೆಗಾಗಿ ತನು-ಮನ-ಧನದಿಂದ ಶ್ರಮಿಸುತ್ತಿರುವ ತಮ್ಮೆಲ್ಲರಿಗೂ ಪರಮಾತ್ಮ ಯಶಸ್ಸನ್ನು ಕರುಣಿಸಲಿ. ನಮ್ಮ ಸಮಾಜದ ವ್ಯಕ್ತಿಗಳು ಚಿತ್ರರಂಗದಲ್ಲಿ, ರಾಜಕೀಯ ರಂಗದಲ್ಲಿ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಪ್ರಜ್ವಲಿಸಬೇಕು. ಸಮಾಜದ ಉನ್ನತಿಗೆ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಅಖಿಲ ಭಾರತ ಕುರುಹಿನಶೆಟ್ಟಿ ಸಮಾಜದ ಮೂಲ ಪೀಠವಾದ ಕುರಹಟ್ಟಿ ಪೇಟೆಯಲ್ಲಿರುವ ಶ್ರೀ ನೀಲಕಂಠ ಮಠದಲ್ಲಿ ಕುರುಹಿನಶೆಟ್ಟಿ ಸಮಾಜದ ಮೂಲ ಪೀಠಾಧೀಶ್ವರರ ೨೬ನೇ ವರ್ಧಂತಿ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ಹೂವಿನಹಡಗಲಿಯ ರಮೇಶ ಜಂಬಣ್ಣ ಗಣಪಾ ಮಾತನಾಡಿ, ಸಮಾಜದ ಒಳಿತಿಗಾಗಿ ಹಾಗೂ ಅಭಿವೃದ್ಧಿಯೊಂದಿಗೆ ಸಮಾಜವನ್ನು ಉನ್ನತ ಸ್ಥಾನಕ್ಕೆ ತರುವ ಕೆಲಸವನ್ನು ಎಲ್ಲರೂ ಕೂಡಿ ಮಾಡಬೇಕಿದೆಯೆಂದರು.

ಕುರುಹಿನಶೆಟ್ಟಿ ಸಮಾಜದ ಹಿರಿಯರಾದ ಕೀರ್ತೆಪ್ಪ ಪಂಪಣ್ಣ ಗೋಟೂರ, ಶ್ರೀ ಗೌರಿಶಂಕರ ಮಹಿಳಾ ವಿವಿದೋದ್ದೇಶಗಳ ಸಂಘದ ಅಧ್ಯಕ್ಷೆ ಶಶಿಕಲಾ ನೀಲಕಂಠಪ್ಪ ಶ್ಯಾವಿ ಸಾಮದರ್ಭಿಕವಾಗಿ ಮಾತನಾಡಿದರು.
ವರ್ಧಂತಿ ಉತ್ಸವ ಸಮಿತಿ ಅಧ್ಯಕ್ಷ ವಾಸು ತಿಮ್ಮಪ್ಪ ಜೋಗಿ ಸ್ವಾಗತಿಸಿದರು. ಸ್ನೇಹಾ ಗೋಟೂರ ಪ್ರಾರ್ಥಿಸಿದರು. ರಾಜು ಲಕ್ಷö್ಮಣಪ್ಪ ಧೂಳಾ ಕಾರ್ಯಕ್ರಮ ನಿರೂಪಿಸಿದರು. ಬಿಚ್ಚಾಲ ಅಂಬಾದಾಸ, ದೇವರಕೊಂಡ ಪುಂಡಲೀಕ ನೀಲಕಂಠ, ಗುರುಮೂರ್ತಿ ಮಲ್ಲೆಶಪ್ಪ ಗಟ್ಟಿ, ಹನಮಂತಯ್ಯ ಆಂಜನಪ್ಪ, ತಿಮ್ಮಣ್ಣ ಶ್ಯಾವಿ, ನಾಗಪ್ಪ ತಟ್ಟಿ, ನಿಂಗಪ್ಪ ಬಸಪ್ಪ ಚೇಗೂರ, ದೇವೆಂದ್ರಪ್ಪ ಗೋಟೂರ, ವಾಸು ತಿಪ್ಪಣ್ಣ ಜೋಗಿ, ಲಕ್ಷ್ಮಿ ಶಂಕರ ಕಾಕಿ, ಶಶಿಕಲಾ ನೀಲಕಂಠಪ್ಪ ಶ್ಯಾವಿ, ರಘುನಾಥ ತುಕ್ಕಾ, ನಿಂಗಪ್ಪ ಚೇಗೂರ, ಪ್ರಭು ರೊಡ್ಡಾನವರ, ಶಶಿಕಲಾ ನಿ.ಶ್ಯಾವಿ, ಚನ್ನಬಸಪ್ಪ ಹಿಂಡಿ ಸೇರಿದಂತೆ ಕುರುಹಿನಶೆಟ್ಟಿ ಸಮಾಜದ ಮುಖಂಡರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗದಗ-ಬೆಟಗೇರಿ ಕುರುಹಿನಶೆಟ್ಟಿ ಸಮಾಜದ ವರಿಷ್ಠ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಮಾತನಾಡಿ, ಶ್ರೀಮಠದ ಜಿರ್ಣೋದ್ಧಾರ, ಕಲ್ಯಾಣ ಮಂಟಪ, ಹಾಗೂ ಶ್ರೀ ನೀಲಕಂಠೇಶ್ವರ ಮಠದ ಕಾಮಗಾರಿಯು ಮುಕ್ಕಾಲು ಭಾಗ ಮುಗಿದಿದೆ. ಲೋಕಾರ್ಪಣೆ ಮಾಡಲು ಇನ್ನೂ ಸ್ವಲ್ಪ ಆರ್ಥಿಕ ಅವಶ್ಯಕತೆಯಿದ್ದು ತಾವೆಲ್ಲರೂ ಸಹಕರಿಸಿ ಕಾಮಗಾರಿ ಪೂರ್ಣಗೊಳ್ಳಲು ನೆರವಾಗಬೇಕೆಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!