HomeEducationಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆ ಬರೆದ ಕೆ.ಜಿ. ಮುದಗಲ್ಲ ಪ್ರೌಢಶಾಲೆ

ಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆ ಬರೆದ ಕೆ.ಜಿ. ಮುದಗಲ್ಲ ಪ್ರೌಢಶಾಲೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಸಮೀಪದ ಶಿಗ್ಲಿಯ ಕೆ.ಜಿ. ಮುದಗಲ್ಲ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪರೀಕ್ಷೆಗೆ ಕುಳಿತ 43 ಮಕ್ಕಳಲ್ಲಿ 12 ಮಕ್ಕಳು ಉನ್ನತ ದರ್ಜೆಯಲ್ಲಿ ಪಾಸಾದರೆ, 31 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ಮೂಲಕ ಸತತ 31ನೇ ವರ್ಷವೂ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ತಸ್ಲೀಮಾ ಪಟ್ಟಣದ-87.44, ಸಮರ್ಥ ದೇವಾಂಗಮಠ-86.4, ಶ್ವೇತಾ ಮುಳಗುಂದ-85.28, ಹರೀಶ ಹಗ್ಗರದ-85.12, ಸಂಜನಾ ಬಾವಿಕಟ್ಟಿ-83.80, ಅನಿತಾ ಕೆರಿ-83.20, ವಿಕಾಸ ಮರಾಠೆ-82.24, ಶ್ರೀನಿವಾಸ ಹುಲಗೂರ-82.08, ಸಂಜನಾ ಬಂಕಾಪೂರ-81.06, ಶಿವಕ್ಕ ಮಠಪತಿ-81.02, ರಮೇಶ ಬಂಕಾಪೂರ-80.08, ನಿಖಿಲ್ ಯಳವತ್ತಿ-80.04, ಸಾತ್ವಿಕ್ ಹುಲಗೂರ-80.06, ಸಂಜನಾ ಹುಲಿ-79.38, ಐಶ್ವರ್ಯ ನವಲೆ-78.72 ಪ್ರತಿಶತ ಅಂಕಗಳನ್ನು ಪಡೆದಿದ್ದಾರೆ.

ಗ್ರಾಮೀಣ ಪ್ರದೇಶದ ಮಕ್ಕಳ ಸಾಧನೆಗೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳ ಪರಿಶ್ರಮದಿಂದ ಈ ಇತಿಹಾಸ ನಿರ್ಮಿಸಲು ಸಾಧ್ಯವಾಗಿದ್ದು, ರಾಜ್ಯದಲ್ಲಿಯೇ ಉತ್ತಮ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಗದಗ ಜಿಲ್ಲೆಗೆ ಹೆಮ್ಮೆಯ ಸಂಗತಿ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಚೇರಮನ್ ಬಾಬುಸಾಬ ಪಟ್ಟಣದ, ಆಡಳಿತಾಧಿಕಾರಿಗಳಾದ ರಂಜನ್ ಪಾಟೀಲ, ಸಿ.ಆರ್. ಗೋಕಾವಿ, ರಾಜರತ್ನ ಹುಲಗೂರ, ಚಾಮರಾಜ ಹುಲಗೂರ, ಸಂಸ್ಥೆಯ ಕಾರ್ಯರ್ಶಿ ಹಾಗೂ ಶಾಲಾ ಮುಖೋಪಾಧ್ಯಾಯ ಎಲ್.ಎಸ್. ಅರಳಹಳ್ಳಿ ಶುಭ ಕೋರಿದ್ದಾರೆ.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!