ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಕೆ.ಎಚ್. ಪಾಟೀಲ ಪುಟ್ಬಾಲ್ ಲೀಗ್‌ನಲ್ಲಿ ಆ.18ರಂದು ಮೊದಲ ಪಂದ್ಯದಲ್ಲಿ ವಾರಿಯರ್ಸ್ ವಿರುದ್ಧ ಕಿಕ್ಕರ್ಸ್ ತಂಡಗಳ ನಡುವೆ ಹಣಾಹಣಿ ನಡೆದು ವಾರಿಯರ್ಸ್ ತಂಡದ ವಿನಾಯಕ ಹಿರೇಮಠ ಎರಡು ಗೋಲನ್ನು ಹೊಡೆದು 2-1 ಗೋಲುಗಳಿಂದ ವಾರಿಯರ್ಸ್ ತಂಡ ಗೆಲವು ಸಾಧಿಸಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ವಾರಿಯರ್ಸ್ ತಂಡದ ವಿನಾಯಕ ಹಿರೇಮಠ ಪಡೆದುಕೊಂಡರು.
ಎರಡನೇ ಪಂದ್ಯ ಅನ್ ಬೀಟೇಬಲ್-ಸ್ಟ್ರೈಕರ್ಸ್ ತಂಡಗಳ ನಡುವೆ ನಡೆದು 2-2 ಗೋಲುಗಳಿಂದ ಪಂದ್ಯ ಡ್ರಾ ಆಯಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅನ್ ಬೀಟೇಬಲ್ ತಂಡದ ಶೀನು ಪಡೆದುಕೊಂಡರು.
ಮೂರನೇ ಪಂದ್ಯ ಸ್ಕೈಲೈನ್-ಮಾಸ್ಟರ್ಸ್ ನಡುವೆ ಏರ್ಪಟ್ಟಟು, ಸ್ಕೈಲೈನ್ ತಂಡ 2-0 ಗೋಲುಗಳಿಂದ ಗೆಲುವು ಸಾಧಿಸಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ಕೈಲೈನ್ ತಂಡದ ನಾಯಕ ಓಂಕಾರ ಪಡೆದುಕೊಂಡರು.
ನಾಲ್ಕನೇ ಪಂದ್ಯ ಡಿಫೆಂಡರ್ಸ್-ಕಾರ್ನರ್ಸ್ ನಡುವೆ ನಡೆದು, ಡಿಫೆಂಡರ್ಸ್ ತಂಡದ ಚೇತನ ಭದ್ರಾಪೂರ ಗೋಲುಗಳನ್ನು ಹೊಡೆದು ಹಾಗೂ ವಿಶ್ವನಾಥ ಗೌಡರ 1 ಗೋಲನ್ನುಹೊಡೆದು ಪಂದ್ಯವನ್ನು 4-0ರಿಂದ ಗೆಲ್ಲಿಸಿದರು. ಪಂದ್ಯ ಶ್ರೇಷ್ಠ ಡಿಫೆಂಡರ್ಸ್ ತಂಡದ ವಿಶ್ವನಾಥ ಗೌಡರ ಪಡೆದುಕೊಂಡರು.
ಐದನೇ ಪಂದ್ಯ ಹಸ್ಲರ್ಸ್-ರೆಬೆಲ್ ನಡುವೆ ನಡೆದು, 1-1 ಗೋಲುಗಳಿಂದ ಡ್ರಾ ಆಯಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮೈನುದ್ದೀನ ಪಡೆದುಕೊಂಡರು.
ಆರನೇ ಪಂದ್ಯ ಅವೆಂಜರ್ಸ್-ಟರ್ಮಿನೆಟರ್ಸ್ ನಡುವೆ ನಡೆದು, ಟರ್ಮಿನೆಟರ್ಸ್ ತಂಡದ ಸಮೀಉಲ್ಲಾ ಶೇಖ 1 ಗೋಲನ್ನು ಹೊಡೆದು ಪಂದ್ಯ ಗೆಲ್ಲಿಸಿದರು. 1-0 ಇಂದ ಎವೆಂರ‍್ಸ್ ತಂಡ ಸೋಲುಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಟರ್ಮಿನೆಟರ್ಸ್ ತಂಡದ ಸಮಿಉಲ್ಲಾ ಶೇಖ ಪಡೆದುಕೊಂಡರು.
ಈ ಎಲ್ಲ ಪಂದ್ಯಗಳನ್ನು ಗದಗ-ಬೆಟಗೇರಿ ಅವಳಿ ನಗರದ ಸುಮಾರು 5 ಸಾವಿರ ಜನ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು. ಕರ್ನಾಟಕ ಸ್ಪೋಟ್ಸ್ ಆ್ಯಂಡ್ ಎಜ್ಯುಕೇಶನ್ ಅಕಾಡೆಮಿಯ ಅಧ್ಯಕ್ಷ ಸರ್ಫರಾಜ ಶೇಖ ಅವಳಿ ನಗರದ ಜನತೆಯ ಉತ್ಸಾಹ ಇದೇ ರೀತಿ ಮುಂದುವೆಯಲೆಂದು ವಿನಂತಿಸಿದರು.