HomeGadag Newsಕೆ.ಎಚ್. ಪಾಟೀಲ ಫುಟ್ಬಾಲ್ ಲೀಗ್ ಸೀಸನ್-2

ಕೆ.ಎಚ್. ಪಾಟೀಲ ಫುಟ್ಬಾಲ್ ಲೀಗ್ ಸೀಸನ್-2

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕೆ.ಎಚ್. ಪಾಟೀಲ ಸ್ಪೋರ್ಟ್ಸ್ ಇವೆಂಟ್ಸ್ ಹಾಗೂ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ ಅಕಾಡೆಮಿ ಗದಗ ಇವರ ವತಿಯಿಂದ ನಡೆಯುತ್ತಿರುವ ಸಚಿವ ಎಚ್.ಕೆ ಪಾಟೀಲರ ಅಯೋಜನೆಯಲ್ಲಿ, ಯುವ ನಾಯಕರಾದ ಕೃಷ್ಣಗೌಡ ಪಾಟೀಲ ಹಾಗೂ ಸಚಿನ ಪಾಟೀಲರ ಉಪಸ್ಥಿತಿಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ಸಾವಿರಾರು ಕ್ರೀಡಾಪ್ರೇಮಿಗಳು ಪಂದ್ಯಾವಳಿಗಳನ್ನು ವೀಕ್ಷಿಸಿದರು.

4ನೇ ಕ್ವಾಟರ್ ಪೈನಲ್ ಪಂದ್ಯ ಕಿಕ್ಕರ್ಸ್-ಹಸಲರ್ಸ್ ನಡುವೆ ನೇರ ಹಣಾಹಣಿ ನಡೆದು, ಎರಡು ತಂಡಗಳು ಸಮನಾಗಿ 1-1 ಗೋಲುಗಳನ್ನು ಪಡೆದು ಪಂದ್ಯ ಡ್ರಾ ಆಯಿತು. ನಂತರ ಅಂಫೈರ್‌ಗಳ ನಿರ್ಣಯದ ಪ್ರಕಾರ 14 ನಿಮಿಷ ಹೆಚ್ಚು ಸಮಯ ನೀಡಲಾಯಿತಾದರೂ ಯಾವ ತಂಡವೂ ಗೋಲನ್ನು ಹೊಡೆಯಲಿಲ್ಲ. ನಂತರ ಎರಡು ತಂಡಗಳಿಗೆ ಪೆನಾಲ್ಟಿ ನೀಡಲಾಯಿತು. ಆಗ ಹಸಲರ್ಸ್ ತಂಡ 6 ಗೋಲು, ಕಿಕ್ಕರ್ಸ್ ತಂಡ 7 ಗೋಲುಗಳನ್ನು ಹೊಡೆದು ಸೆಮಿಫೈನಲ್ ಲಗ್ಗೆ ಇಟ್ಟಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕಿಕ್ಕರ್ಸ್ ತಂಡದ ಹ್ಯಾರಿಸ್ ಧಾರವಾಡ ಬಾಚಿಕೊಂಡರು.

ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ ಅಕಾಡೆಮಿಯ ಅಧ್ಯಕ್ಷ ಹಾಗೂ ಪಂದ್ಯಾವಳಿಗಳ ಆಯೋಜಕರಾದ ಸರ್ಫರಾಜ ಶೇಖ ಎಲ್ಲ ಪುಟ್ಬಾಲ್ ಆಟಗಾರರಿಗೆ ಹಾಗೂ ಪುಟ್ಬಾಲ್ ಪ್ರಿಯರಿಗೆ ಅಭಿನಂದನೆ ಸಲ್ಲಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!