HomePolitics Newsಶಿಗ್ಗಾವಿ ಉಪಚುನಾವಣೆ: ಕೈ ಬಂಡಾಯ ಅಭ್ಯರ್ಥಿ ಮಂಜುನಾಥ ಕುನ್ನೂರು ನಾಮಪತ್ರ ತಿರಸ್ಕೃತ

ಶಿಗ್ಗಾವಿ ಉಪಚುನಾವಣೆ: ಕೈ ಬಂಡಾಯ ಅಭ್ಯರ್ಥಿ ಮಂಜುನಾಥ ಕುನ್ನೂರು ನಾಮಪತ್ರ ತಿರಸ್ಕೃತ

For Dai;y Updates Join Our whatsapp Group

Spread the love

ಹಾವೇರಿ: ಮೂರೂ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಇದೀಗ ಶಿಗ್ಗಾವಿ ಕೇತ್ರದ ಉಪ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದ 26 ಅಭ್ಯರ್ಥಿಗಳ ಪೈಕಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕರವಾಗಿದ್ದು, 7 ನಾಮಪತ್ರಗಳು ತಿರಸ್ಕೃತವಾಗಿದೆ.

ಹೌದು ಚುನಾವಣಾಧಿಕಾರಿ ಮಹ್ಮದ್ ಖಿಜರ್ ನೇತೃತ್ವದ ತಂಡ ನಾಮಪತ್ರ ಪರಿಶೀಲನೆ ನಡೆಸಿತು. 26 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 46 ನಾಮಪತ್ರಗಳ ಪೈಕಿ 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದೆ. 19 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿವೆ. ಅ.30ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ಬಿಜೆಪಿಯ ಭರತ್ ಬೊಮ್ಮಾಯಿ, ಕಾಂಗ್ರೆಸ್‌ನ ಯಾಸಿರ್ ಅಹ್ಮದಖಾನ್‌ ಪಠಾಣ, ಸೋಸಿಯಾಲಿಸ್ಟ್ ಪಾರ್ಟಿ(ಇಂಡಿಯಾ) ಅಭ್ಯರ್ಥಿ ಖಾಜಾಮೊದ್ದೀನ ಗುಡಗೇರಿ, ಹಿಂದೂಸ್ತಾನ ಜನತಾ ಪಕ್ಷದ ಅಭ್ಯರ್ಥಿ ತಳವಾರ ಶಿವಕುಮಾರ, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ, ಟಿಪ್ಪು ಸುಲ್ತಾನ್ ಪಾರ್ಟಿ ಅಭ್ಯರ್ಥಿ ಶೌಖತ್ ಅಲಿ ಬಂಕಾಪೂರ, ಪಕ್ಷೇತರ ಅಭ್ಯರ್ಥಿಗಳಾದ ಡಾ.ಜಿ.ಎಚ್‌. ಇಮ್ರಾಪುರ, ಗುರುಸಿದ್ದಗೌಡ್ರ, ಜಿತೇಂದ್ರ ಕನವಳ್ಳಿ, ನಬಿಸಾಬ್‌ ಅಲ್ಲಿಸಾಬ್‌ ಮೆಳ್ಳೆಗಟ್ಟಿ, ಮಕ್ತುಮಸಾಬ ಜಾಪರಸಾಬ ಮುಲ್ಲಾ, ರಾಜು ನಾಯಕವಾಡಿ, ವೀರಯ್ಯ ಓದಿಸುವಮಠ, ಶಿದ್ದಪ್ಪ ಹೊಸಳ್ಳಿ, ಶಿವಪುಸತ್ರ ಶಾಮರಾವ್ ಪಾಟೀಲ, ಶಂಕ್ರಪ್ಪ ಹುಲಸೋಗಿ, ಶ್ರೀಕಾಂತಗೌಡ ಪೊಲೀಸಗೌಡ್ರ, ಸಾತಪ್ಪ ದೇಸಾಯಿ ಹಾಗೂ ಸೈಯದ್ ಅಜೀಮ್‌ಪೀರ ಖಾದ್ರಿ ಅವರ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!