ಕಲಬುರಗಿ: ಸೆಕ್ಸ್ ಗೆ ಒಪ್ಪದ ಹಿನ್ನೆಲೆ ಹೆಂಡತಿಯನ್ನೆ ಪಾಪಿ ಗಂಡ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬಟಗೇರಾದಲ್ಲಿ ನಡೆದಿದೆ. ನಾಗಮ್ಮ ಕೊಲೆಯಾದ ದುರ್ಧೈವಿಯಾಗಿದ್ದು, ಶೇಖಪ್ಪ ಕೊಲೆ ಮಾಡಿ ಆರೋಪಿಯಾಗಿದ್ದಾನೆ. ಪತ್ನಿಯನ್ನು ಹತ್ಯೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ತಾನಾಗಿಯೇ ಶರಣಾಗಿದ್ದಾನೆ.
Advertisement
ತನಿಖೆ ನಡೆಸಿದಾಗ, ಶೇಖಪ್ಪ ರಾತ್ರಿಯಿಂದ ಎರಡು ಬಾರಿ ಸೆಕ್ಸ್‌ಗೆ ಒತ್ತಾಯ ಮಾಡಿದ್ದ. ಆದರೆ ಎರಡೂ ಬಾರಿಯೂ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ನಿನ್ನನ್ನು ಕೊಚ್ಚಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವೇಳೆ ಕೊಚ್ಚಿ ಹಾಕು ನೋಡೋಣ ಎಂದು ಪತ್ನಿ ಹೇಳಿದ್ದಾಳೆ. ಆಗ ಶೇಖಪ್ಪ ಕೆರಳಿ ಪತ್ನಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇನ್ನೂ ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.