ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಅಬ್ಬಿಗೇರಿ ಶಾಖಾ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷ ಶ್ರೀಮಠದಲ್ಲಿ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಮಹಾ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮವು ಗುರುವಾರ ಸಂಜೆ ನಡೆಯಿತು.
ರೋಣ ಗುಲಗಂಜಿ ಮಠದ ಗುರುಪಾದ ಶ್ರೀಗಳು ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುವದರೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಮೌಲ್ಯಗಳನ್ನು ತಿಳಿಸಿಕೊಡುತ್ತವೆ. ಪುರಾಣ ಪ್ರವಚನದಂತಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಶ್ರೀಶರಣರಂತೆ ಬಾಳೋಣ ಎಂದು ಆಶೀರ್ವದಿಸಿದರು.
ಏ.25ರಿಂದ ಆರಂಭವಾದ ಈ ಪುರಾಣ ಪ್ರತಿದಿನ ಸಂಜೆ 7.30ಕ್ಕೆ ನಡೆಯಲಿದ್ದು, ಮೇ 15ರಂದು ಸಂಪನ್ನಗೊಳ್ಳಲಿದೆ ಎಂದು ಸದ್ಭಕ್ತ ಮಂಡಳಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಹಾತ್ಮಪ್ಪ ಬಸವರಡ್ಡೇರ, ಮುದಿಯಪ್ಪ ಹೆರೂರ, ಬಾಬುಗೌಡ್ರು ಪಾಟೀಲ್, ವೀರಪ್ಪ ಹೊಂಬಳ್ಳಿ ಸುರೇಶ ಶಿದ್ನೇಕೊಪ್ಪ ಮಲ್ಲಿಕಾರ್ಜುನಪ್ಪ ಕಲ್ಲೇಶಾನಿ, ಬಸವರಾಜ ಶಿವಶಿಂಪರ, ಶರಣಪ್ಪ ಮುಗಳಿ, ಹೊನ್ನಪ್ಪ ವೀರಘಂಟಿ, ಮಹಾದೇವಪ್ಪ ಬಸವರಡ್ಡೇರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ರಾಜೂರಿನ ಶ್ರೀಮತಿ ಅಕ್ಕಮಹಾದೇವಿ ಪುರಾಣ ಪ್ರವಚನ ನೀಡಿದರು. ಅನ್ನದಾನ ವಿಜಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಗದಗ ವೀರೇಶ್ವರ ಪುಣ್ಯಾಶ್ರಮದ ರಮೇಶ್ ಹಟ್ಟಿ ಹಾರ್ಮೋನಿಯಂ ಸಂಗೀತ ನುಡಿಸಿದರು. ಕೂಡ್ಲಿಗಿಯ ಡಿ.ವೆಂಕಟೇಶ್ ತಬಲಾ ಸಾಥ್ ನೀಡಿದರು. ಶಿಕ್ಷಕ ಎಮ್.ಎಮ್. ಗುಗ್ಗರಿ ಸ್ವಾಗತಿಸಿದರು. ಆಯ್.ಬಿ. ಒಂಟೇಲಿ ನಿರೂಪಿಸಿದರು. ಪಾಲಣ್ಣ ಯಲ್ಲರಡ್ಡಿ ವಂದಿಸಿದರು.