ಗದಗ: ಗದಗ ನಗರದ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ರೇಣುಕಾಚಾರ್ಯ ಮಂದಿರದಿಂದ ಶ್ರೀಚಂದ್ರಶೇಖರ ದೇವರ ಸಾನ್ನಿಧ್ಯದಲ್ಲಿ, ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಸಮ್ಮುಖ ಹಾಗೂ ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ ನೇತೃತ್ವದಲ್ಲಿ ಶ್ರೀಅನ್ನಪೂರ್ಣೇಶ್ವರಿ ರಥೋತ್ಸವದ ಕಳಸದ ಪೂಜೆ ನೆರವೇರಿಸಿ ಶ್ರೀಮಠಕ್ಕೆ ಭವ್ಯ ಮೆರವಣಿಗೆಯ ಮೂಲಕ ತರಲಾಯಿತು.



