ಕಲಬುರಗಿ: ಕಲಬುರಗಿಯಲ್ಲಿ ಮಿಲ್ಕ್ ಪೌಡರ್ ಕಳ್ಳ ಸಾಗಾಟ ಆರೋಪ ಕೇಳಿಬಂದಿದೆ. ಎರಡು ಚೀಲದಲ್ಲಿ ಅಕ್ರಮವಾಗಿ ಹಾಲಿನ ಪೌಡರ್ ಅನ್ನು ಗೂಡ್ಸ್ ವಾಹನದಲ್ಲಿ ಆಳಂದ ನಿಂದ ಮಹಾರಾಷ್ಟ್ರ ಕಡೆ ಸಾಗಿಸುತ್ತಿದ್ದ ವೇಳೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸರ್ಕಾರ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಈ ಹಾಲಿನ ಪೌಡರ್ ನೀಡಲಾಗುತ್ತದೆ.
ಆದರೆ ಈ ಖದೀಮರು ಅದನ್ನೇ ಕಳ್ಳ ಸಾಗಟ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನೂ ಹಾಲಿನ ಪೌಡರ್ ಬ್ಯಾಗ್, ಗೂಡ್ಸ್ ವಾಹನವನ್ನು ಸ್ಥಳೀಯರು ಆಳಂದ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಹಾಲಿನ ಪೌಡರ್ ಎಲ್ಲಿಂದ ತರಲಾಗಿದೆ ಅಂತಾ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.



