ತಂದೆಯಾಗಿ ಬಡ್ತಿ ಪಡೆದ ಕನ್ನಡಿಗ ಕೆ ಎಲ್‌ ರಾಹುಲ್: ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಅಥಿಯಾ ಶೆಟ್ಟಿ!

0
Spread the love

ಕ್ರಿಕೆಟಿಗ KL ರಾಹುಲ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ನಟಿ ಅಥಿಯಾ ಶೆಟ್ಟಿ, ಕ್ರಿಕೆಟಿಗ ಕೆ ಎಲ್ ರಾಹುಲ್ ಅವರು ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದು, ಇಂದು ಅಥಿಯಾ ಶೆಟ್ಟಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರಂತೆ.

Advertisement

ಈ ಶುಭಸುದ್ದಿಯನ್ನು ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಮಗೆ ಹೆಣ್ಣು ಮಗುವಿನ ಜನನವಾಗಿದೆ ಎಂದು ಕೆ.ಎಲ್​ ರಾಹುಲ್​ ಎಕ್ಸ್‌ನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಜೋಡಿಗೆ ನಟಿ ಪೂಜಾ ಹೆಗ್ಡೆ, ಅಹಾನ್ ಶೆಟ್ಟಿ, ಸುನೀಲ್ ಶೆಟ್ಟಿ, ವಿಕ್ರಾಂತ್‌ ಮಾಸ್ಸಿ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.

2023 ಜ.23ರಂದು ಕೆ.ಎಲ್ ರಾಹುಲ್ ಜೊತೆ ಅಥಿಯಾ ಅದ್ಧೂರಿಯಾಗಿ ಮದುವೆಯಾಗಿದ್ದರು. ಇನ್ನೂ ಕಳೆದ ನವೆಂಬರ್‌ನಲ್ಲಿ, ಅಥಿಯಾ ಶೆಟ್ಟಿ ತಾಯಿಯಾಗುತ್ತಿರುವ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.


Spread the love

LEAVE A REPLY

Please enter your comment!
Please enter your name here