2022ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸಿನಿಮಾ ದೇಶ, ವಿದೇಶದ ಮಂದಿಯನ್ನು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿತ್ತು. ತುಳು ನಾಡ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರಿದ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ ೧ ಚಿತ್ರೀಕರಣದ ಬ್ಯುಸಿಯಾಗಿದ್ದಾರೆ. ಆದ್ರೆ ಚಿತ್ರತಂಡಕ್ಕೆ ಮಾತ್ರ ಒಂದರ ಹಿಂದೊದರಂತೆ ಸಾವಿನ ಹೊಡೆತಗಳು ಬೀಳುತ್ತಿದ್ದು ಇದರಿಂದ ಚಿತ್ರತಂಡ ಕಂಗಾಲಾಗಿದೆ.
ʼಕಾಂತಾರ ಚಾಪ್ಟರ್ 1 ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಅನಾಹುತ ಸಂಭವಿಸುತ್ತಲೇ ಇದೆ. ಇದೇ ವಿಚಾರಕ್ಕೆ ರಿಷಬ್ ಶೆಟ್ಟಿ ದೈವದ ಮೊರೆ ಹೋಗಿದ್ದು ಇದೆ. ಆ ವೇಳೆ ರಿಷಬ್ ಶೆಟ್ಟಿಗೆ ದೈವವೇ ಸಾಲು ಸಾಲು ಸಾವಿನ ಸುಳಿವು ನೀಡಿತ್ತಾ ಎನ್ನುವ ಪ್ರಶ್ನೆ ಮೂಡಿದೆ.
ಕಿರುತೆರೆಯ ಕಾಮಿಡಿ ಕಿಲಾಡಿಗಳು ಶೋ ಕಲಾವಿದ, ಪ್ರತಿಭಾನ್ವಿತ ನಟ ರಾಕೇಶ್ ಪೂಜಾರ್ ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ರಾಕೇಶ್ ಪೂಜಾರಿ ಅವರಿಗೆ ಸಿಕ್ಕಿತ್ತು. ಇದೇ ಖುಷಿಯಲ್ಲಿ ರಾಕೇಶ್ ಸಿನಿಮಾ ಶೂಟಿಂಗ್ನಲ್ಲೂ ಭಾಗಿಯಾಗಿದ್ರು. ಬೆಳಗ್ಗೆ ಶೂಟಿಂಗ್ ಮುಗಿಸಿ ಬಂದ ರಾಕೇಶ್ ಪೂಜಾರಿ ಅವರಿಗೆ ರಾತ್ರಿ ಹೃದಯಾಘಾತ ಸಂಭವಿಸಿದ್ದು, ರಾಕೇಶ್ ಸಾವು ಇಡೀ ಚಿತ್ರತಂಡವನ್ನೇ ಬೆಚ್ಚಿಬೀಳಿಸಿದೆ.
ಕಾಂತಾರ ಸಿನಿಮಾಗಾಗಿಯೇ ರಾಕೇಶ್ ಪೂಜಾರಿ ತನ್ನ ಗೆಟಪ್ ಬದಲಿಸಿದ್ದರಂತೆ. ಗಡ್ಡ ಬೆಳಸಿಕೊಂಡು, ವರ್ಕೌಟ್ ಮಾಡಿ ಲುಕ್ ಬದಲಿಸಿಕೊಂಡಿದ್ರು ಎಂದು ರಾಕೇಶ್ ಆಪ್ತರು ಹೇಳಿಕೊಂಡಿದ್ದಾರೆ. ಕಾಂತಾರದಂತಹ ದೊಡ್ಡ ಸಿನಿಮಾದಲ್ಲಿ ನಟಿಸುತ್ತಿದ್ದ ಖುಷಿ ರಾಕೇಶ್ ಅವರಲ್ಲಿ ಇತ್ತು. ಆದರೆ ಅದಕ್ಕೂ ಮುನ್ನವೇ ರಾಕೇಶ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಪ್ರತಿಯೊಬ್ಬರಿಗೂ ಶಾಕ್ ಆಗಿದೆ.
ರಾಕೇಶ್ ನಿಧನದ ಬಗ್ಗೆ ಮಾತಾಡಿದ ಅವರ ಆಪ್ತ ಲೋಕೇಶ್, ಕಾಂತಾರ ಸಿನಿಮಾ ಸಂಕಷ್ಟದ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ನಟಿಸುತ್ತಿದ್ದ ಮೂವರು
ಆರ್ಟಿಸ್ಟ್ ಗಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರಿಗೆ ದೈವ ಹೇಳಿತ್ತಂತೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಚಿತ್ರದ ಬಗ್ಗೆ ಏನು ಹೇಳಲು ಆಗೋದಿಲ್ಲ ಎಂದು ಲೋಕೇಶ್ ಹೇಳಿದ್ದಾರೆ.
ಮುಂಜಾಗ್ರತೆಯನ್ನ ಚಿತ್ರತಂಡ ತೆಗೆದುಕೊಳ್ಳಬೇಕಿದೆ. ಚಿತ್ರತಂಡವೇ ರಾಕೇಶ್ ಕುಟುಂಬಕ್ಕೆ ಸಹಾಯ ಮಾಡಬೇಕಿದೆ. ರಾಕೇಶ್ ಮನೆಯ ಆಧಾರಸ್ತಂಭವಾಗಿದ್ದ. ಅವನಿಗೆ ಅಮ್ಮ , ತಂಗಿ ಇಬ್ರೇ ಇರೋದು. ಮನೆ ಮಗನನ್ನು ಕಳೆದುಕೊಂಡು ಅವರು ಹೇಗಿರ್ತಾರೋ ಎಂದು ಲೋಕೇಶ್ ಕಣ್ಣೀರು ಹಾಕಿದ್ದಾರೆ.
ಇತ್ತೀಚಿಗಷ್ಟೇ ಕಾಂತಾರ ಚಾಪ್ಟರ್ 1 ಸೆಟ್ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ರು. ಈಗ ರಾಕೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿಂದೆ ಆರ್ಟಿಸ್ಟ್ಗಳಿದ್ದ ಬಸ್ ಅಪಘಾತವಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ರು. ಕಲಾವಿದರಿಗೆ ಸಂಬಳ ನೀಡದ ಆರೋಪದ ಜೊತೆಗೆ ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪ ಕೂಡ ಕಾಂತಾರ ಚಿತ್ರತಂಡದ ವಿರುದ್ಧ ಕೇಳಿ ಬಂದಿತ್ತು.