ಕಾರ್ಗಿಲ್ ವಿಜಯೋತ್ಸವ: ಬಿಜೆಪಿಯಿಂದ ಪಂಜಿನ ಮೆರವಣಿಗೆ

0
Kargil Victory: Flag march by BJP
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ನಗರ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಹಬೀಬ ಅವರ ನೇತೃತ್ವದಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಪಂಜಿನ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಹೆಮ್ಮೆಯ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಯುದ್ಧವನ್ನು ಗೆದ್ದಿದ್ದಾರೆ ಎಂದರು.

Advertisement

ಬಿಜೆಪಿ ಹಿರಿಯರಾದ ಎಂ.ಎಸ್. ಕರಿಗೌಡ್ರ ಮಾತನಾಡಿ, ನಮ್ಮ ಹೆಮ್ಮೆಯ ಸೈನಿಕರು ಹಾಗೂ ಅಂದಿನ ಪ್ರಧಾನಮಂತ್ರಿಗಳಾದ ಅಟಲ್‌ಬಿಹಾರಿ ವಾಜಪೇಯಿಯವರು ದೇಶದ ಒಳಿತಿಗಾಗಿ ತೆಗೆದುಕೊಂಡ ನಿರ್ಣಯ ಕಾರ್ಗಿಲ್ ಯುದ್ಧ ಗೆಲ್ಲುವ ಹಾಗೆ ಮಾಡಿತು ಎಂದು ತಿಳಿಸಿ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಗದಗ ನಗರ ಅಧ್ಯಕ್ಷ ಅನಿಲ ಅಬ್ಬಿಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ನವೀನ ಕೊಟೆಕಲ್, ರಾಹುಲ್ ಸಂಕಣ್ಣವರ, ಶ್ರೀಪತಿ ಉಡುಪಿ, ಬಿ.ಎಚ್. ಲದ್ವಾ, ವಂದನಾ ವರ್ಣೇಕರ, ಕೌಶಲ್ಯ ಬದಿ, ಇರ್ಷಾದ ಮಾನ್ವಿ, ರತ್ನಾ ಕುರಗೋಡ, ದೇವಪ್ಪ ಗೊಟೂರ, ಪ್ರಕೋಷ್ಠಗಳ ಸಂಯೋಜಕ ಶಶಿಧರ ದಿಂಡೂರ, ಕಾರ್ತಿಕ ಶಿಗ್ಲಿಮಠ, ಕಾರ್ತಿಕ ಮುತ್ತಿನಪೆಂಡಿಮಠ, ವಿಶ್ವನಾಥ ಶಿರಿಗಣ್ಣವರ, ಅಪ್ಪಣ್ಣ ಟೆಂಗಿನಕಾಯಿ, ಶಿವು ಹಿರೇಮನಿಪಾಟೀಲ, ಮಂಜುನಾಥ ತಳವಾರ, ವಿನಾಯಕ ಹೊರಕೇರಿ, ಕೇಶವ ಕೊಟ್ನೆಕಲ್, ಸಾಗರ ಪಾಪನಾಳ, ಬಸವರಾಜ ನರೆಗಲ್, ರಾಹುಲ ಅರಳಿ, ವಿರೇಶಪ್ರಭು ಗದಗಿನ್, ರವಿ ಚವ್ಹಾಣ, ಅವಿನಾಶ ಹೊನಗುಡಿ ಸೇರಿದಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾಗಿಯಾಗಿದ್ದರು.


Spread the love

LEAVE A REPLY

Please enter your comment!
Please enter your name here