ಬೆಂಗಳೂರು: ಮೈಸೂರಿನ ಯಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಪರಿಣಾಮ ಇಂದು ಮತ್ತು ನಾಳೆ ಹೊರಡಬೇಕಿದ್ದ 14 ರೈಲು ಗಳ ಸಂಚಾರ ಬಂದ್ ಆಗಿವೆ. ಈ ನಡುವೆ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಹಾಸನ ಜಿಲ್ಲೆ ಎಡಕುಮೇರಿ-ಕಡಗರವಳ್ಳಿ ನಡುವಿನ,
Advertisement
ದೋಣಿಗಲ್ ಎಂಬಲ್ಲಿ ಶುಕ್ರವಾರ ಸಂಜೆ ಭೂಕುಸಿತ ಉಂಟಾಗಿ ರೈಲು ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಕೆಲ ರೈಲುಗಳ ಸಂಚಾರವನ್ನು ಜುಲೈ 29ರವರೆಗೆ ರದ್ದು ಮಾಡಲಾಗಿದೆ. ಕೆಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರದ್ದುಗೊಂಡ ರೈಲುಗಳ ವಿವರ
- 1.ಜುಲೈ 28 ಮೆಜೆಸ್ಟಿಕ್ ನಿಲ್ದಾಣದಿಂದ ಹೊರಡಬೇಕಿದ್ದ ರೈಲು ಸಂಖ್ಯೆ. 16611 KSR ಬೆಂಗಳೂರು ಕಣ್ಣೂರು ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
- ಜುಲೈ 28 ಹೊರಡಬೇಕಿದ್ದ ರೈಲು ಸಂಖ್ಯೆ. 16595 KSR ಬೆಂಗಳೂರು ಕಾರವಾರ ಎಕ್ಸ್‌ಪ್ರೆಸ್ ಸಂಚಾರ ರದ್ದು
- ಜುಲೈ 28 ಮತ್ತು ಜುಲೈ 29 ರಂದು ಹೊರಡಬೇಕಿದ್ದ ರೈಲು ಸಂಖ್ಯೆ. 16512 ಕಣ್ಣೂರು KSR ಬೆಂಗಳೂರು ಎಕ್ಸ್‌ಪ್ರೆಸ್ ಸಂಚಾರ ರದ್ದು.
- 4.ಜುಲೈ 28 ಮತ್ತು ಜುಲೈ 29 ದು ಹೊರಡಬೇಕಿದ್ದ ರೈಲು ಸಂಖ್ಯೆ 16596 ಕನ್ವರ್ KSR ಬೆಂಗಳೂರು ಎಕ್ಸ್‌ಪ್ರೆಸ್ ಸಂಚಾರ ರದ್ದು.
- 5 ರೈಲು ಸಂಖ್ಯೆ 16585 SMVT ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ಇಂದು ರದ್ದಾಗಿದೆ.
- ಜುಲೈ 29 ರಂದು ಹೊರಡಬೇಕುದ್ದ ರೈಲು ಸಂಖ್ಯೆ. 16586 ಮುರ್ಡೇಶ್ವರ-SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
- ಜುಲೈ 28 ರಂದು ಹೊರಡಬೇಕಿದ್ದ ರೈಲು ಸಂಖ್ಯೆ 07377 ವಿಜಯಪುರ ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ಸಂಚಾರ ರದ್ದು.
- ಜುಲೈ 29 ರಂದು ಹೊರಡಬೇಕಿದ್ದ ರೈಲು ಸಂಖ್ಯೆ 07377 ಮಂಗಳೂರು ಸೆಂಟ್ರಲ್ ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ಸಂಚಾರ ರದ್ದು.
- ಜುಲೈ 28 ರಂದು ಹೊರಡಬೇಕಿದ್ದ ರೈಲು ಸಂಖ್ಯೆ 16540 ಮಂಗಳೂರು ಜೆಎನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸಂಚಾರ ರದ್ದು.
- ಜುಲೈ 28 ರಂದು ಹೊರಡಬೇಕಿದ್ದ ರೈಲು ಸಂಖ್ಯೆ. 06567 SMVT ಬೆಂಗಳೂರು – ಕಾರವಾರ ವಿಶೇಷ ಎಕ್ಸ್‌ಪ್ರೆಸ್ ಸಂಚಾರ ರದ್ದು.
- ಜುಲೈ 28 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 06568 ಕಾರವಾರ – SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ಸಂಚಾರ ರದ್ದು.
- ಜುಲೈ 28 ರಂದು ಪ್ರಾರಂಭವಾಗುವ ರೈಲು ಸಂಖ್ಯೆ. 16586 ಮುರ್ಡೇಶ್ವರ SMVT ಬೆಂಗಳೂರು ಎಕ್ಸ್‌ಪ್ರೆಸ್ ಸಂಚಾರ ರದ್ದು.
- ಜುಲೈ 28 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16575 ಯಶವಂತಪುರ ಮಂಗಳೂರು ಜೆಎನ್ ಎಕ್ಸ್‌ಪ್ರೆಸ್ ಸಂಚಾರ ರದ್ದು.
- ಜುಲೈ 28 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16576 ಮಂಗಳೂರು Jn ಯಶವಂತಪುರ ಎಕ್ಸ್‌ಪ್ರೆಸ್ಸಂಚಾರ ರದ್ದು.