ಕನ್ನಡಿಗರಿಗೆ ಕ್ಷಮೆ ಕೇಳಲು ಮೊಂಡಾಟ ಪ್ರದರ್ಶಿಸುತ್ತಿದ್ದ ತಮಿಳು ನಟ ಕಮಲ್ ಹಾಸನ್ ‘ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯಾಚಿಸುವುದಿಲ್ಲ’ ಎಂದು ಉದ್ಧಟತನ ಮೆರೆದಿದ್ದರು. ಹೀಗಾಗಿ ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಅವರ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಅಂತ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು.
ಥಗ್ ಲೈಫ್ ಸಿನಿಮಾ ರಿಲೀಸ್ಗೆ ಭದ್ರತೆ ಕೋರಿ ಕಮಲ್ ಹಾಸನ್ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ತಮಿಳು ನಟ ಕಮಲ್ ಹಾಸನ್ಗೆ ಜಡ್ಜ್ ತರಾಟೆ ತೆಗೆದುಕೊಂಡಿದ್ದಾರೆ. ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ನಡೀತು.
ಕಮಲ್ ಹಾಸನ್ ಅವರು ಅಷ್ಟುದ್ದ ಪತ್ರ ಬರೆದರೂ ಕೂಡಾ ಕ್ಷಮೆ ಎನ್ನುವ ಒಂದು ಪದವನ್ನು ಬಳಸಿಲ್ಲ. ಇದನ್ನು ಕೋರ್ಟ್ ಕೂಡಾ ಗಮನಿಸಿದೆ. ಈ ಹಿನ್ನೆಲೆಯಲ್ಲಿ ನಟನಿಗೆ ಆತ್ಮಪ್ರತಿಷ್ಟೆ(ಇಗೋ) ಅವರಿಗೆ ಅಡ್ಡ ಬರುತ್ತಿರಬಹುದು. ಕಮಲ್ ಹಾಸನ್ ಯಾರೇ ಆಗಿರಲಿ. ಜನರ ಭಾವನೆ ನೋಯಿಸಬಾರದು ಎಂದು ಕೋರ್ಟ್ ಹೇಳಿದೆ.
ಈ ವೇಳೆ ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಫಿಲ್ಮ್ ಚೇಂಬರ್ ಜೊತೆ ಮಾತುಕತೆ ನಡೆಸಲು ಒಂದು ವಾರಗಳ ಸಮಯ ಕೋರಿದರು. ಅರ್ಜಿದಾರರ ಪರ ವಕೀಲರೇ 1 ವಾರಗಳ ಸಮಯ ಕೇಳಿದರಿಂದ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿಕೆ ಮಾಡಿದೆ..