ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಮರಾಠಾ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಡಿ.3ರ ಸಾಯಂಕಾಲ 7 ಗಂಟೆಗೆ ಕಾರ್ತಿಕೋತ್ಸವ ಜರುಗಲಿದೆ. ನಂತರ ಶ್ರೀ ಜಗದಂಬಾದೇವಿಯ ಪಾಲಕಿ ಉತ್ಸವ, ಮಹಾಪ್ರಸಾದ ನೆರವೇರಲಿದೆ.
ದೇವಿಯ ಸದ್ಭಕ್ತರು, ಸಮಾಜ ಬಾಂಧವರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಲು ಸಂಘದ ಅಧ್ಯಕ್ಷ ವಿನಿತಕುಮಾರ ವ್ಹಿ.ಜಗತಾಪ, ಗೌರವ ಕಾರ್ಯದರ್ಶಿ ಶಿವಾಜಿ ವಾಯ್.ಗ್ವಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



