ಕಲುಬುರಗಿ: KEA ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಇಂಜಿನಿಯರ್ ರುದ್ರಗೌಡನ 17 ಹಾಲ್ಟಿಕೇಟ್ ಗಿರಾಕಿಗಳಿಗೆ ಕಾದಿದ್ಯಾ ಸಂಕಷ್ಟ ಅನ್ನೋ ವಿಷ್ಯ ಹರಿದಾಡ್ತಿದೆ..ಅಕ್ರಮ ಪ್ರಕರಣದ ತನಿಖೆ ಮಾಡ್ತಿರೋ CID ಇಂತಹ ಮೂಲವನ್ನೇ ಇದೀಗ ಕೆದಕುತ್ತಿದೆ..
Advertisement
ಅಥಣಿಯಲ್ಲಿ ನೀರಾವರಿ ಇಂಜಿನಿಯರ್ ಆಗಿರೋ ಜೇವರ್ಗಿ ಮೂಲದ ರುದ್ರಗೌಡನ ಬಂಧನದ ನಂತ್ರ ಆರೋಪಿ ಬಳಿ 17 ಹಾಲ್ಟಿಕೇಟ್ ಪತ್ತೆ ಮಾಡಿತ್ತು..ಪತ್ತೆಯಾದ ಆ 17 ಗಿರಾಕಿಗಳಿಗೂ ರುದ್ರಗೌಡನಿಗೂ ಏನ್ ವ್ಯವಹಾರ ಎಷ್ಟರ ವ್ಯವಹಾರ ಅನ್ನೋ ಮಾಹಿತಿ ಹೊರಹಾಕಲು ಮುಂದಾಗಿದೆ CID ಟೀಂ. ಹೀಗಾಗಿ ರುದ್ರಗೌಡ ಬಾಯ್ಬಿಡೋ ಅಂಶಗಳ ಮೇಲೆ ಆ 17 ಗಿರಾಕಿಗಳ ಇತಿಹಾಸ ಗೊತ್ತಾಗಲಿದೆ ಅಂತ ಹೇಳಲಾಗ್ತಿದೆ..