ವಿಜಯಸಾಕ್ಷಿ ಸುದ್ದಿ, ಡಂಬಳ : ಯುಗಾದಿ ಹಬ್ಬದ ಪ್ರಯುಕ್ತ ಕೆಂಚಮ್ಮದೇವಿ ಜಾತ್ರಾ ಮಹೋತ್ಸವವು ಬೀರಲಿಂಗೇಶ್ವರ ಡೊಳ್ಳು ಕುಣಿತ ಹಾಗೂ ಮೆರವಣೆಗೆಯೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. ಸಾಂಪ್ರದಾಯಕ ಬಂಡಾರವನ್ನು ಭಕ್ತರು ಪರಸ್ಪರ ಮುಖಕ್ಕೆ ಹಚ್ಚಿಕೊಂಡು ಮೆರವಣೆಗೆಯುದ್ದಕ್ಕೂ ಸಂಭ್ರಮಿಸಿದರು.
ಮೆರವಣೆಗೆ ಸಂದರ್ಭದಲ್ಲಿ ವಿವಿಧ ಜಾತಿ-ಧರ್ಮಗಳ ಭಕ್ತರು ಪಾಲ್ಗೊಳ್ಳುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು. ನಂತರ ಮಹಿಳೆಯರು ದೇವರಿಗೆ ಉಡಿ ತುಂಬುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಜಾತ್ರಾ ಕಮಿಟಿಯ ಹಿರಿಯರಾದ ಮರಿಯಪ್ಪ ಸಿದ್ದಣ್ಣವರ, ಕೆ.ಎನ್. ದೊಡ್ಡಮನಿ, ದೇವಪ್ಪ ತಳಗೇರಿ, ಮೈಲೆಪ್ಪ ಹರಿಜನ, ರಂಗಪ್ಪ ಪೂಜಾರ, ಮಾಯಪ್ಪ ತಳಗೇರಿ, ನಿಂಗಪ್ಪ ಮಾದರ, ಕೆಂಚಪ್ಪ ಪೂಜಾರ, ದೇವಪ್ಪ ಗೌಡಣ್ಣವರ, ಸೋಮಪ್ಪ ತಳಗೇರಿ, ಬಸವರಾಜ ವಗ್ಗರಣಿ, ಅರ್ಜುನಪ್ಪ ಪೂಜಾರ, ಮಲ್ಲಪ್ಪ ಪೂಜಾರ, ಹನಮಂತ ಮೇವುಂಡಿ, ಮೈಲೆಪ್ಪ ಬೆಟಗೇರಿ, ಯಮನೂರ ದೊಡ್ಡಮನಿ, ಬಸುರಾಜ ದೊಡ್ಡಮನಿ ಸೇರಿದಂತೆ ಜಾತ್ರಾ ಕಮಿಟಿಯ ಎಲ್ಲಾ ಪದಾಧಿಕಾರಿಗಳು, ಭಕ್ತಾದಿಗಳು ಇದ್ದರು.