ದಾವಣಗೆರೆ:- SBI ಬ್ಯಾಂಕ್ ಗೆ ಖದೀಮರು ಕನ್ನ ಹಾಕಿದ ಘಟನೆ ನಗರದ ನ್ಯಾಮತಿ ಪಟ್ಟಣದಲ್ಲಿ ಜರುಗಿದೆ. ಇನ್ನೂ ಖದೀಮರ ಖತರ್ನಾಕ್ ಪ್ಲಾನ್ ಕಂಡು ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ.
ಎಸ್, ಇಂದು ಬೆಳ್ಳಂಬೆಳಗ್ಗೆ ನ್ಯಾಮತಿ ಪಟ್ಟಣದ SBI ಬ್ಯಾಂಕ್‌ನಲ್ಲಿ ಖದೀಮರು ಈ ಲೂಟಿ ಮಾಡಿದ್ದಾರೆ. ಬ್ಯಾಂಕ್‌ನ ಕಿಟಕಿ ಮುರಿದು ಅಪಾರ ಪ್ರಮಾಣದ ಹಣ, ಚಿನ್ನ ಕಳ್ಳತನ ಮಾಡಿದ್ದಾರೆ. ನ್ಯಾಮತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕದ್ದ ಹಣ, ಚಿನ್ನ ಎಷ್ಟು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್ ಕಿಟಕಿಯ ಕಂಬಿ ಮುರಿದ ಕಳ್ಳರು, ದರೋಡೆ ವೇಳೆ ಡಾಗ್‌ಗೆ ವಾಸನೆ ಬಾರದಂತೆ ಖಾರದಪುಡಿ ಎರಚಿ ಕಳ್ಳತನ ಮಾಡಿದ್ದಾರೆ. ಶ್ವಾನದಳದ ದಾರಿತಪ್ಪಿಸಲು ಬ್ಯಾಂಕ್ ತುಂಬಾ ಖಾರದ ಪುಡಿ ಚೆಲ್ಲಿದ್ದಾರೆ. ವ್ಯವಸ್ಥಿತ ಬ್ಯಾಂಕ್ ದರೋಡೆ ಮಾಡಿರುವ ಖದೀಮರು, CCTV ಡಿವಿಆರ್ ಸಹ ಖದೀಮರು ಹೊತ್ತೊಯ್ದಿದ್ದಾರೆ.
ಡಾಗ್ ಸ್ಕ್ವ್ಯಾಡ್ ಹಾಗೂ ಬೆರಳಚ್ಚು ತಜ್ಞರು ಬ್ಯಾಂಕ್‌ಗೆ ಭೇಟಿ ನೀಡಿದ್ದು, ಪೊಲೀಸರು ಕಳ್ಳರಿಗಾಗಿ ಇಡೀ ನಗರದ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.