ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದ ಚೈತ್ರಾ ಕುಂದಾಪುರ್ ಅವರಿಗೆ ಕಿಚ್ಚ ಸುದೀಪ್ ಅವರು, ಇಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಅವರಿಗೆ ಅನಾರೋಗ್ಯ ಆಗಿದ್ದರಿಂದ ಅವರು ಆಸ್ಪತ್ರೆಗೆ ಹೋಗಿ ಬಂದಿದ್ದರು. ಹೊರಹೋಗಿ ಬಂದ ಅವರು ಎಲ್ಲಾ ಸ್ಪರ್ಧಿಗಳಿಗೆ ಯಾವ ರೀತಿಯಲ್ಲಿ ಆಡಬೇಕು ಎಂಬುದರ ಹಿಂಟ್ ಕೊಟ್ಟಿದ್ದರು. ಇದು ಹೊರಗಿನ ಅಭಿಪ್ರಾಯ ಎಂದು ಕೂಡ ಹೇಳಿದ್ದರು. ಇದರಿಂದ ಸುದೀಪ್ ಸಖತ್ ಸಿಟ್ಟಾಗಿದ್ದಾರೆ. ಅಲ್ಲದೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚೈತ್ರಾ ಕ್ಷಮೆ ಕೇಳಿದರು.
ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ, ಬೆಳಗ್ಗೆ ಬಂದು ಅದನ್ನು ಸ್ಪರ್ಧಿಗಳಿಗೆ ಹೇಳುವ ಉದ್ದೇಶವೇನು ಅಂತ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಆಗ ಚೈತ್ರಾ, ನಾನೇ ಡಾಕ್ಟರ್ ಹತ್ತಿರ ಕೆಲವೊಂದು ಕೇಳಿದ್ದೇ, ಅಲ್ಲಿದ್ದ ನರ್ಸ್ ಹೀಗೆ ಹೇಳಿದರು. ಪ್ರತಿಯೊಬ್ಬರ ಮೇಲಿನ ಅಭಿಪ್ರಾಯ ತಿಳಿಸಿದರು. ಅದು ನನ್ನ ಅಭಿಪ್ರಾಯ ಅಲ್ಲ ಎಂದರು.
ತಪ್ಪು ಮಾಡಿ ಮಾತಿನಲ್ಲೇ ಸಮರ್ಥನೆ ಮಾಡಿಕೊಳ್ತಿದ್ದ ಚೈತ್ರಾ ಮೇಲೆ ಸುದೀಪ್ ರಾಂಗ್ ಆದರು. ಬಾಯಿ ಮುಚ್ಚುವಂತೆ ಚೈತ್ರಾಗೆ ಶ್.. ಎಂದು ಸನ್ನೆ ಮಾಡಿದರು. ಸುದೀಪ್ ಕೋಪ ಕಂಡು ಚೈತ್ರಾ ಕುಂದಾಪುರ ಗಪ್ ಚುಪ್ ಆದರು. ಮಾತು ನಿಲ್ಲಿಸಿ ಚೈತ್ರಾ ಕಣ್ಣೀರು ಹಾಕಿದರು. ಆ ನಂತರ ಉಸಿರು ಕಟ್ಟಿಸುವ ವಾತಾವರಣದಲ್ಲಿ ನನಗೆ ಇರೋಕೆ ಆಗಲ್ಲ. ಮನೆಗೆ ಕಳುಹಿಸಿ ಎಂದು ಚೈತ್ರಾ ಬಿಗ್ ಬಾಸ್ ಮನವಿ ಮಾಡಿದ್ದಾರೆ.
ಆದರೆ ಬಿಗ್ ಬಾಸ್ ತೀರ್ಮಾನ ಏನು ಎಂಬುವುದು ಭಾನುವಾರದ ಸಂಚಿಕೆಯಲ್ಲಿ ತಿಳಿದು ಬರಲಿದೆ.