ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ʻಬಿಗ್ ಬಾಸ್ ಕನ್ನಡʼ ಸೀಸನ್ 12ರ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇತ್ತೀಚೆಗೆ ಬಿಗ್ ಬಾಸ್ ಸೀಸನ್ ೧೨ರ ಲೋಗೋ ಲಾಂಚ್ ಮಾಡಲಾಗಿತ್ತು. ಆ ಬಳಿಕ ಯಾವಾಗ ಕಾರ್ಯಕ್ರಮ ಶುರುವಾಗುತ್ತೆ ಎಂದು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಇದೀಗ ಬಿಗ್ ಬಾಸ್ 12 ಪ್ರಾರಂಭದ ದಿನಾಂಕವನ್ನ ಖುದ್ದು ಕಿಚ್ಚ ಸುದೀಪ್ ಅವರೇ ಘೋಷಿಸಿದ್ದಾರೆ.
ಯೆಸ್. ಕಿಚ್ಚ ಸುದೀಪ್ ನಿರೂಪಣೆಯ ʻಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ಇನ್ನೆನ್ನೂ ಎರಡು ದಿನ ಮಾತ್ರವೇ ಭಾಕಿ ಇದೆ. ಅದರಲ್ಲೂ ಈ ಸೀಸನ್ ಕೂಡ ಸುದೀಪ್ ಅವರೇ ನಿರೂಪಣೆ ಮಾಡ್ತಿರೋದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಅಲ್ಲದೆ ಈ ಸೀಸನ್ ಹೊಸ ಥೀಮ್, ರೋಚಕ ಸ್ಪರ್ಧಿಗಳು ಮತ್ತು ಟ್ವಿಸ್ಟ್‌ಗಳೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವ ನಿರೀಕ್ಷೆಯನ್ನು ಬಿಗ್ ಬಾಸ್ ತಂಡ ಹೇಳಿಕೊಂಡಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುದೀಪ್ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳು ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕಿಚ್ಚ ಅತೀ ಶೀಘ್ರದಲ್ಲೇ ಪರದೆ ಮೇಲೆ ಸಿಕ್ತೇನೆ. ಸೆಪ್ಟೆಂಬರ್ 28ರಿಂದ ನಿಮಗೆ ಟಿವಿಯಲ್ಲಿ ಸಿಗುತ್ತೇನೆ. ನಿಮ್ಮ ಪ್ರೀತಿಗೆ ಥ್ಯಾಂಕ್ಯೂ, ಲವ್ ಯೂ ಆಲ್ ಅಂತ ಹೇಳುವ ಮೂಲಕ ʻಬಿಗ್ ಬಾಸ್ ಕನ್ನಡ ಸೀಸನ್ 12’ರ ಪ್ರಾರಂಭ ದಿನಾಂಕವನ್ನ ರಿವೀಲ್ ಮಾಡಿದ್ದಾರೆ.



