Home Entertainment BBK 11: ಹೊಸ ದಶಕ, ಹೊಸ ಅಧ್ಯಾಯಕ್ಕೆ ಕಿಚ್ಚ ಸುದೀಪ್ ಆ್ಯಂಕರ್! ಯಾವಾಗ್ಲಿಂದ ಹೊಸ ಆಟ ಗೊತ್ತಾ.?

BBK 11: ಹೊಸ ದಶಕ, ಹೊಸ ಅಧ್ಯಾಯಕ್ಕೆ ಕಿಚ್ಚ ಸುದೀಪ್ ಆ್ಯಂಕರ್! ಯಾವಾಗ್ಲಿಂದ ಹೊಸ ಆಟ ಗೊತ್ತಾ.?

0
BBK 11: ಹೊಸ ದಶಕ, ಹೊಸ ಅಧ್ಯಾಯಕ್ಕೆ ಕಿಚ್ಚ ಸುದೀಪ್ ಆ್ಯಂಕರ್! ಯಾವಾಗ್ಲಿಂದ ಹೊಸ ಆಟ ಗೊತ್ತಾ.?
Spread the love

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಗ್‌ ಬಾಸ್‌ ಕನ್ನಡ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಕಲರ್ಸ್‌ ಕನ್ನಡ ರಿಯಾಲಿಟಿ ಶೋ ಕುರಿತಾದ ಅಪ್‌ಡೇಟ್‌ಗಳನ್ನು ನೀಡಲು ಆರಂಭಿಸಿದೆ. ಅದರ ನಡುವೆ 10 ಸೀಸನ್​ಗಳ ಯಶಸ್ಸಿನ ಬಳಿಕ 11ನೇ ಸೀಸನ್​ ಆರಂಭ ಆಗುತ್ತಿದೆ ‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋ ಹೊಸ ಸೀಸನ್​ಗೂ ಕಿಚ್ಚ ಸುದೀಪ್​ ಅವರೇ ಸಾರಥ್ಯ ವಹಿಸಿಕೊಂಡಿದ್ದಾರೆ. ಅವರನ್ನು ಬಿಟ್ಟು ಬೇರೆ ನಟರನ್ನು ನಿರೂಪಕರ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ಅಭಿಮಾನಿಗಳ ಮಾತು ನಿಜವಾಗಿದೆ.

https://x.com/bengalurubouy2/status/1835313834896081118?ref_src

‘ಗಿಚ್ಚಿ ಗಿಲಿಗಿಲಿ 3’ ಗ್ರ್ಯಾಂಡ್​ ಫಿನಾಲೆಯ ಸಂಚಿಕೆಯ ನಡುವೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಹೊಸ ಪ್ರೋಮೋ ಬಿತ್ತರ ಆಗಿದೆ. ಇದರಲ್ಲಿ ಸುದೀಪ್​ ಅವರು ಖಡಕ್​ ಆಗಿ ಡೈಲಾಗ್​ ಹೊಡೆದಿದ್ದಾರೆ. ‘10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಈ ಪ್ರೋಮೋ ನೋಡಿ ಸುದೀಪ್​ ಅಭಿಮಾನಿಗಳಿಗೆ ಖುಷಿ ಆಗಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಈಗಾಗಲೇ ಅನೇಕ ವ್ಯಕ್ತಿಗಳ ಹೆಸರು ಕೇಳಿಬರುತ್ತಿದೆ. ಈ ಬಾರಿ ಯಾರೆಲ್ಲ ಬಿಗ್​ ಬಾಸ್​ ಮನೆಯೊಳಗೆ ಕಾಲಿಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.


Spread the love

LEAVE A REPLY

Please enter your comment!
Please enter your name here