ರಾಮನಗರ: ಕೆಎನ್ ರಾಜಣ್ಣ ಬಿಜೆಪಿಗೆ ಸೇರಲು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ರಾಮನಗರನಗರಲ್ಲಿ ಮಾತನಾಡಿದ ಅವರು, ರಾಜಣ್ಣ ತಮ್ಮ ಮಾತಿನಿಂದಲೇ ಕೆಟ್ಟುಹೋದರು.
Advertisement
ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಮಾತಿದೆ. ಇದರಲ್ಲಿ ನಮ್ಮ ನಾಯಕರ ಷಡ್ಯಂತ್ರ ಇಲ್ಲವೇ ಇಲ್ಲ. ಪಕ್ಷದ ಮೇಲೆ ಗೂಬೆ ಕೂರಿಸಲು ಪಿತೂರಿ ನಡೆಯುತ್ತಿದೆ. ಡೆಲ್ಲಿ ಸಮಾವೇಶ ಮಾಡಲಿ, ನಾವು ಹಿಡಿದುಕೊಳ್ಳಲು ಆಗುತ್ತಾ? ರಾಜಣ್ಣನವರ ಬ್ರೈನ್ ಮ್ಯಾಪಿಂಗ್ ಆಗಲಿ.
ಯಾರ ಜೊತೆ ಸಂಪರ್ಕದಲ್ಲಿದ್ದಾರೆಂದು ತಿಳಿಯಲಿದೆ. ನಮ್ಮ ಸರ್ಕಾರ ಇದೆ ಎಂದು ರಾಜಣ್ಣ ಇಲ್ಲೇ ಇದ್ದಾರೆ. ಅವರು ಬೇರೆ ಬೇರೆ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಬಾಲಕೃಷ್ಣ ಹೇಳಿದ್ದಾರೆ.