ಕೊಡಗು:- ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಜ್ಯುವೆಲ್ಲರಿ ಅಂಗಡಿ ಧಗಧಗನೆ ಹೊತ್ತಿ ಉರಿದ ಘಟನೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜರುಗಿದೆ.
ಮಡಿಕೇರಿಯ ಮಹದೇವಪೇಟೆಯಲ್ಲಿರುವ ಪ್ರಮೋದ್ ಎಂಬುವರ ಚಂದ್ರಿಕಾ ಚಿನ್ನಾಭರಣ ಅಂಗಡಿಗೆ ಬೆಂಕಿ ಬಿದ್ದಿದ್ದು, ನೋಡು ನೋಡುತ್ತಿದ್ದಂತೆ ಮಳಿಗೆಗೆ ಬೆಂಕಿ ಆವರಿಸಿದೆ. ಕೂಡಲೇ ನೀರು ಹಾಕಿ ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನ ಪಟ್ಟಿದ್ದಾರೆ. ಬಳಿಕ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿ ಭಾರೀ ಅವಘಡ ತಪ್ಪಿಸಿದ್ದಾರೆ.



