ಚಿಕ್ಕಮಗಳೂರು: ಕಾಂಗ್ರೆಸ್ ಮನೆಯಿಂದ ದಿನಕ್ಕೊಂದು ಬೆಳವಣಿಗೆಗಳು ವರದಿಯಾಗುತ್ತಿದ್ದು ಕ್ರಾಂತಿ ಕಿಚ್ಚನ್ನು ಹೆಚ್ಚಿಸುತ್ತಿವೆ. ನವೆಂಬರ್ ಶುರುವಾಗಿದ್ದು, ಆರಂಭದಲ್ಲೇ ಪದಗ್ರಹಣ ಮತ್ತು ಡೆಡ್ ಲೈನ್ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಚರ್ಚೆ ಮಾಡಿದ ಕೊಡಲೇ ಸಿಎಂ ಬದಲಾಗಲ್ಲ ಎಂದು ಸಚಿವ ಕೆ .ಜೆ. ಜಾರ್ಜ್ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಕೆಲವರು ಚರ್ಚೆ ಮಾಡಿದ ಕೊಡಲೇ ಮುಖ್ಯಮಂತ್ರಿ ಬದಲಾವಣೆ ಆಗಲ್ಲ.
ಈಗಾಗಲೇ ಹೈಕಮಾಂಡ್, ಶಾಸಕರು ಒಬ್ಬರನ್ನು ಒಪ್ಪಿ ಮುಖ್ಯಮಂತ್ರಿ ಮಾಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಖಾಲಿ ಇದ್ದಾಗ ಅದರ ಬಗ್ಗೆ ಚರ್ಚೆ. ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಯಾರೂ ಚರ್ಚೆ ಮಾಡಬಾರದೆಂದು ಹೈಕಮಾಂಡ್ ಹೇಳಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಧ್ಯಮದವರಿಗೆ ಸುದ್ದಿ ಸಿಗುತ್ತಿಲ್ಲ. ರಚನಾತ್ಮಕವಾಗಿ ಒಳ್ಳೆಯ ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ನಿಮಗೆ ಸುದ್ದಿ ಸಿಗುತ್ತಿಲ್ಲ, ಅದಕ್ಕೆ ನೀವು ಸುದ್ದಿಯನ್ನು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದೀರಿ. ದಯವಿಟ್ಟು ರಾಜ್ಯ ರಾಜಕೀಯದ ಬಗ್ಗೆ ಏನೂ ಕೇಳಬೇಡಿ, ಹೇಳೋಕೆ ಕಷ್ಟ ಆಗುತ್ತೆ. ನನಗೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ್ದು ಮಾತ್ರ ಕೇಳಿ ಎಂದರು.


