ಕೋಲಾರ:- ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ರೌಡಿಶೀಟರ್ ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಮಾರಿಕುಪ್ಪಂ ಬಳಿ ಜರುಗಿದೆ.
Advertisement
ಕೊಲೆಯಾದ ರೌಡಿಶೀಟರ್ ನನ್ನು ಶಿವಕುಮಾರ್ ಅಲಿಯಾಸ್ ತೇನ್ ಎಂದು ಗುರುತಿಸಲಾಗಿದೆ. ಮೃತ ಶಿವಕುಮಾರ್ ತನ್ನ ಪ್ರಿಯತಮೆಯೊಂದಿಗೆ ಕಾಮಸಮುದ್ರಕ್ಕೆ ಹೋಗುವಾಗ, ಕಾಮಸಮುದ್ರ ಹಾಗೂ ಕೆಜಿಎಫ್ ರಸ್ತೆಯ ವಿರುಪಾಕ್ಷಿ ಗ್ರಾಮದ ಬಳಿ ಬೈಕ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಶಿವಕುಮಾರ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿದ್ದಾರೆ. ಇನ್ನೂ ಶಿವಕುಮಾರ್ ಜೊತೆಗಿದ್ದ ಪ್ರಿಯತಮೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಲೆಯಾದ ಶಿವಕುಮಾರ್ ಮೇಲೆ ಆಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣಗಳಿದ್ದವು. ಸದ್ಯ ಕೊಲೆ ಮಾಡಿದ ಆರೋಪಿಗಳಿಗೆ ಪೊಲೀಸರು ಶೋಧ ಕೈಗೊಂಡಿದ್ದಾರೆ.