Home Karnataka News Koppala: ಹಾರ್ಟ್ ಅಟ್ಯಾಕ್‌ಗೆ 26ರ ಯುವತಿ ಬಲಿ!

Koppala: ಹಾರ್ಟ್ ಅಟ್ಯಾಕ್‌ಗೆ 26ರ ಯುವತಿ ಬಲಿ!

0
Koppala: ಹಾರ್ಟ್ ಅಟ್ಯಾಕ್‌ಗೆ 26ರ ಯುವತಿ ಬಲಿ!
Spread the love

ಕೊಪ್ಪಳ:– ಹೃದಯಾಘಾತದಿಂದ 26 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ಜರುಗಿದೆ.

26 ವರ್ಷದ ಮಂಜುಳಾ ಹೂಗಾರ್ ಮೃತ ಯುವತಿ. ಇವರು ಕೊಪ್ಪಳದ ಶಿವಗಂಗಾ ಲೇಔಟ್ ನಿವಾಸಿ ಎನ್ನಲಾಗಿದೆ. ಮಧ್ಯಾಹ್ನ ಮಂಜುಳಾಗೆ ಲೋ ಬಿಪಿಯಾಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಳು. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಯುವತಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

LEAVE A REPLY

Please enter your comment!
Please enter your name here