ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ತನ್ನ ಅಧಿಕೃತ ವೆಬ್ಸೈಟ್ ವಿಳಾಸವನ್ನು ಬದಲಾಯಿಸಿದೆ.
ಅಭ್ಯರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ವೆಬ್ಸೈಟ್ ಪೋರ್ಟಲ್ ಜಾರಿಗೆ ತರಲಾಗಿದೆ.
ಈ ಹಿಂದೆ ಬಳಕೆಯಲ್ಲಿದ್ದ kpsc.kar.nic.in ವೆಬ್ಸೈಟ್ ವಿಳಾಸದ ಬದಲಿಗೆ ಇದೀಗ https://kpsc.karnataka.gov.in ಎಂಬ ಹೊಸ ವಿಳಾಸವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ. ಆಡಳಿತಾತ್ಮಕ ಕಾರಣಗಳಿಂದ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇನ್ನು ಮುಂದೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಗಳು, ನೇಮಕಾತಿ ವಿವರಗಳು ಹಾಗೂ ಇತರ ಮಾಹಿತಿಗಾಗಿ ಅಭ್ಯರ್ಥಿಗಳು ಹೊಸ ವೆಬ್ಸೈಟ್ಗೆ ಭೇಟಿ ನೀಡಬೇಕು ಎಂದು ಆಯೋಗದ ಕಾರ್ಯದರ್ಶಿ ಜ್ಯೋತಿ ಕೆ. ಅವರು ತಿಳಿಸಿದ್ದಾರೆ.



