ಬೆಂಗಳೂರು: ಕೆ.ಆರ್ ಪುರಂ ಪೊಲೀಸರ ಕಾರ್ಯಾಚರಣೆ ನಡೆಸಿ 70 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ 1.5 ಕೆಜಿ ಸಿಲ್ವರ್ ವಶಕ್ಕೆ ಪಡೆಯಲಾಗಿದೆ. ತಡರಾತ್ರಿ ಮನೆಗಳವು ಮಾಡ್ತಿದ್ದ ಆರೋಪಿಯನ್ನು ಕೆ.ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಇಸ್ರಾರ್ ಬಂಧಿತ ಆರೋಪಿಯಾಗಿದ್ದು,
ಹಿಂದೆ ಹಲವು ತಡರಾತ್ರಿ ಮನೆಗಳಲ್ಲಿಯೇ ಕಳ್ಳತನ ಮಾಡುತ್ತಿದ್ದ ಮೊಹಮ್ಮದ್ ಇಸ್ರಾರ್, ಕಳ್ಳತನದ ನಂತರ ಬಟ್ಟೆ ಬದಲಾಯಿಸಿ, ಬೈಕ್ ನ ನಂಬರ್ ಪ್ಲೇಟ್ ಕೂಡ ಬದಲಿಸುತ್ತಿದ್ದ,
ಹಾಗೆಯೇ ಕಳೆದ ಮೂರು ವರ್ಷಗಳಿಂದ ಪೊಲೀಸರು ಸಿಕ್ಕದಂತೆ ಚಳ್ಳೆಹಣ್ಣು ತಿನ್ನುತ್ತಿದ್ದ ಪ್ರಕರಣದ ಮಾಸ್ಟರ್ಮೈಂಡ್. ಈ ಹಿಂದೆ ಒಟ್ಟು 17 ಪ್ರಕರಣಗಳನ್ನು ಆರೋಪಿ ಭೇದಿಸಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಪೊಲೀಸರು ಈಗ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.



