ಬಾನ್ಸುರಿಯಲ್ಲಿ ಕಲಾ ದೃಷ್ಟಿ ನೀಡಿದ ಕೃತಿಕಾ

0
puligere
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪುಲಿಗೆರೆ ಉತ್ಸವದ ಉದಯರಾಗ-2ರಲ್ಲಿ ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ಕಲಾವಿದೆ ಕೃತಿಕಾ ಜಂಗಿನಮಠ ಅವರ ಬಾನ್ಸುರಿ(ಕೊಳಲು) ವಾದನ ಹೊಂಬೆಳಕಿನ ಮಳೆ ಸಿಂಚನದ ನಡುವೆ ನೆರೆದಿದ್ದ ಕೇಳುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

Advertisement

ಹುಟ್ಟಿನಿಂದಲೂ ಅಂಧಳಾಗಿರುವ ಕೃತಿಕಾ ಖ್ಯಾತ ಬಾನ್ಸುರಿ ವಾದಕ ಪಂ. ಹರಿಪ್ರಸಾದ ಚೌರಾಸಿಯಾ ಅವರ ಶಿಷ್ಯೆ. ಕುಟುಂಬದ ಸದಸ್ಯರ ಸಹಾಯದಿಂದ ವೇದಿಕೆ ಏರಿದ ಕೃತಿಕಾ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಬಗ್ಗೆ ಕೇಳಿದ್ದ ನನಗೆ ಆ ದೇವಸ್ಥಾನದ ಸನ್ನಿಧಾನದಲ್ಲಿ ಅವಕಾಶ ದೊರೆತಿರುವದು ನನ್ನ ಭಾಗ್ಯ ಎಂದು ಹೇಳಿ ದೇವರನ್ನು ಸ್ಮರಿಸಿ, ರಾಗ ನಟಬೈರವ್‌ದಿಂದ ಕೊಳಲುವಾದನ ಪ್ರಾರಂಭಿಸಿದರು. ರಾಗ ದೇಶ್ ನುಡಿಸಿ ಅಲಾಪದಿಂದ ಜೋಡಜಾಲಾ ಮಂದಲೇ ಜಪತಾಲ್ ತಾಳ ನುಡಿಸಿದರು. ತದನಂತರ ಶಿಶುನಾಳ ಷರೀಫರ ತತ್ವಪದಗಳಾದ ಎಂತಾ ಮೋಜಿನ ಕುದುರಿ ಹತ್ತಿದ ಮೇಲೆ, ಕೊಡಗನ ಕೋಳಿ ನುಂಗಿತ್ತ, ಹಾಗೂ ತರವಲ್ಲ ತಂಗಿ ನಿನ್ನ ತಂಬೂರಿ ಸ್ವರ ತತ್ವಪದಗಳು ಬಾನ್ಸುರಿಯಲ್ಲಿ ನುಡಿಸಿ ಸಭಿಕರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡರು.

ಇವರಿಗೆ ಸಹೋದರ ಕಾರ್ತಿಕ ಜಂಗಿನಮಠ ತಬಲಾ ಸಾಥ್ ನೀಡಿದರು.

 


Spread the love

LEAVE A REPLY

Please enter your comment!
Please enter your name here