ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಜಗತ್ತಿನಲ್ಲಿರುವ ಅನೇಕ ದೇವರುಗಳು ಒಂದೊಂದು ಬಗೆಯ ಪ್ರಿಯರಾಗಿದ್ದಾರೆ. ಅಲಂಕಾರ ಪ್ರಿಯ ವಿಷ್ಣುವಾದರೆ, ಅಭಿಷೇಕ ಪ್ರಿಯ ಶಂಕರ ಎಂಬುದು ಎಲ್ಲರಿಗೂ ಗೊತ್ತು. ಆದರೆ ಪ್ರತಿ ಭಾರತ ಹುಣ್ಣಿಮೆಯ ದಿನದಂದು ಶ್ರೀ ಗುರು ದತ್ತಾತ್ರೇಯನಿಗೆ ಸಲ್ಲಿಕೆಯಾಗುವ ಕ್ಷೀರಾಭಿಷೇಕ ಅತ್ಯಂತ ಶ್ರೇಷ್ಠವಾದುದು ಎಂದು ಶ್ರೀ ದತ್ತಾತ್ರೇಯ ದೇವಸ್ಥಾನದ ಅರ್ಚಕ ಶ್ರೀವಲ್ಲಭಶಾಸ್ತ್ರೀ ಸದರಜೋಷಿ ಹೇಳಿದರು.
ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ೧೧೪ನೇ ಗುರುಪ್ರತಿಪದೆ ಉತ್ಸವದ ನಿಮಿತ್ತ ಶನಿವಾರ ಶ್ರೀ ಗುರು ದತ್ತಾತ್ರೇಯನಿಗೆ ಕ್ಷೀರಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಗೋವುಗಳನ್ನು ದೇವತೆಯೆಂದು ಪೂಜಿಸುತ್ತಾರೆ. ಬಾಲವೃದ್ಧರಾಗಿ ಎಲ್ಲರಿಗೂ ಕ್ಷೀರ ಅತ್ಯಂತ ಪ್ರಿಯವಾಗಿದ್ದು, ಭಗವಂತನಿಗೂ ಸಹ ಗೋ ಕ್ಷೀರ ಅತ್ಯಂತ ಪ್ರಿಯವಾಗಿದೆ ಎಂದು ಸದರಜೋಷಿ ಹೇಳಿದರು.
ದತ್ತಾತ್ರೇಯನಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅವತರಿಸಿದ್ದಾರೆ. ಕ್ಷೀರಾಭಿಷೇಕದಿಂದ ಭಗವಂತ ಸಂಪ್ರೀತನಾಗುತ್ತಾನೆ. ಭಕ್ತರ ಇಷ್ಟಾರ್ಥಗಳನ್ನು ಈಡೇರುವಂತೆ ಹರಸುತ್ತಾನೆ. ಅರುಣ ಜಿ.ಕುಲಕರ್ಣಿ(ಕುರಗಡ್ಡಿ) ಅವರು ಸತತ ೩೪ ವರ್ಷಗಳಿಂದ ಶ್ರೀ ದತ್ತಾತ್ರೇಯರಿಗೆ ಕ್ಷೀರಾಭಿಷೇಕ ಸೇವೆಯನ್ನು ಅರ್ಪಿಸುತ್ತಿದ್ದಾರೆ. ನಿಜಕ್ಕೂ ಅವರು, ಅವರ ಕುಟುಂಬದವರು ಪುಣ್ಯ ಪ್ರಾಪ್ತಿಗೆ ಪಾತ್ರರಾಗಿದ್ದಾರೆ ಎಂದರು.
ವೇ.ಮೂ. ವಿಶ್ವನಾಥಭಟ್ಟ ವೈದ್ಯ, ಎಸ್.ಎಚ್. ಕುಲಕರ್ಣಿ, ಎ.ಜಿ. ಕುಲಕರ್ಣಿ, ಅರುಣ ಕುಲಕರ್ಣಿ, ರಾಮಚಂದ್ರ ಕುಲಕರ್ಣಿ, ಡಾ. ಕೃಷ್ಣಾ ಕಾಳೆ, ಆದರ್ಶ ಕುಲಕರ್ಣಿ, ಅಜಿತ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಹರೀಶ ಕುಲಕರ್ಣಿ, ಆನಂದ ಕುಲಕರ್ಣಿ, ವಸಂತ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ನಾಗರಾಜ ನಾಡಗೇರ, ವಿ.ಆರ್. ಗ್ರಾಮಪುರೋಹಿತ, ಶ್ರೀಧರ ಗ್ರಾಮಪುರೋಹಿತ, ಆನಂದ ಕಾಳೆ, ಬಾಬುರಾವ ಕಾಳೆ, ಮುಕುಂದ ಸೂರಭಟ್ಟನವರ, ರಾಮಕೃಷ್ಣ ಸದರಜೋಶಿ, ಪ್ರಕಾಶ ಕಾಳೆ, ಸೇರಿದಂತೆ ಇತರರಿದ್ದರು.