ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಸಿ.ಬಿ.ಎಸ್.ಇಯ ಸೆಂಟರ್ ಆಫ್ ಎಕ್ಸಲೆನ್ಸ್ ಬೆಂಗಳೂರು ವತಿಯಿಂದ ಹುಬ್ಬಳ್ಳಿ-ಧಾರವಾಡ ಶಾಲಾ ಶಿಕ್ಷಕರಿಗೆ ಸಕ್ರಿಯ ಕಲಿಕಾ ಕೌಶಲ್ಯಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಹುಬ್ಬಳ್ಳಿ, ಧಾರವಾಡ, ನರೇಗಲ್, ರೋಣ, ಮುಂಡರಗಿ ಮುಂತಾದ ಸ್ಥಳಗಳ ಶಿಕ್ಷಕರು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಶುಬಾಂಗಿ ಮೋರೆ, ಆಚಲ ಕೊಂಗವಾಡ, ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯ ನಿರ್ದೇಶಕ ವಿನಾಯಕ್ ಆರ್., ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪ ಪ್ರಾಚಾರ್ಯ ಪಿ.ಜಿ. ಬ್ಯಾಳಿ ದೀಪ ಬೆಳಗಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಶಾಲೆಯ ಪಂ. ಪುಟ್ಟರಾಜ ಗವಾಯಿ ಸಂಗೀತ ತಂಡದ ಬಿಂದು ಗಂಗಣ್ಣವರ ಪ್ರಾರ್ಥನಾ ಗೀತೆ ಹಾಡಿದರು.
ಶಿಕ್ಷಕಿ ಭುವನೇಶ್ವರಿ ಮುದಲಿಯಾರ ಸ್ವಾಗತಿಸಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಶುಬಾಂಗಿನಿ ದಡ್ಡಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ರೇಣುಕಾ ಈಗರಾರ ವಂದಿಸಿದರು.