HomeKarnataka Newsಗದಗದ ಹೃದಯ ಭಾಗದಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಾದ ಆತಂಕ..!

ಗದಗದ ಹೃದಯ ಭಾಗದಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಾದ ಆತಂಕ..!

For Dai;y Updates Join Our whatsapp Group

Spread the love

ಗದಗ: ಗದಗ ನಗರದ ಹೃದಯ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಗದಗ ನಗರದ ಪಂಚಾಕ್ಷರಿ ನಗರದ ಆರನೇಯ ಕ್ರಾಸ್ ಬಳಿ ಪತ್ತೆಯಾಗಿದ್ದು,

https://www.facebook.com/share/r/1FWkDv13wb/

ಚಿರತೆಯನ್ನು ಕಂಡು ನಾಯಿಗಳು ಬೊಗಿಳಿದ್ದಲ್ಲದೆ ಓಡಿ ಹೋಗಿವೆ.

ನಾಯಿಗಳನ್ನು ಕಂಡ ಚಿರತೆಯು ಪಕ್ಕದ ಉದ್ಯಾನವನದ ಒಳಗಡೆ ಓಡಿ ಹೋಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನಗಳಿಂದ ಪಂಚಾಕ್ಷರಿ ನಗರ ಹಾಗೂ ಎಪಿಎಂಸಿ ಬಳಿ ಚಿರತೆ ಓಡಾಟ ನಡೆಸುತ್ತಿದ್ದು, ಮನೆಯಿಂದ ಹೊರಗೆ ಬರಲು ಜನರು ಭಯ ಪಡುತ್ತಿದ್ದಾರೆ.

ವಿಶೇಷವಾಗಿ, ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಓಡಾಟದ ಭೀತಿಯಲ್ಲಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ತಕ್ಷಣ ಕ್ರಮ ಕೈಗೊಳ್ಳಲು ಸ್ಥಳೀಯರು ಒತ್ತಾಯ  ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!