ಸಿ.ಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ : ಬಿ.ಶ್ರೀರಾಮುಲು

0
Let CM Siddaramaiah resign
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮೂಡಾ ಹಗರಣದ ವಿಚಾರದಲ್ಲಿ ತಮ್ಮ ಪಾತ್ರವಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳಂಕದಿಂದ ದೂರವಾಗಲು ಅವರಷ್ಟಕ್ಕೆ ಅವರೇ ರಾಜೀನಾಮೆ ನೀಡಲಿ.

Advertisement

ಅವರ ಸುದೀರ್ಘವಾದ ಪ್ರಾಮಾಣಿಕತೆಯ ರಾಜಕಾರಣ ಶಾಶ್ವತವಾಗಿ ಉಳಿದುಕೊಳ್ಳಬೇಕಾದರೆ ಅವರೇ ರಾಜೀನಾಮೆ ನೀಡುವದು ಸೂಕ್ತ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.

ಅವರು ಲಕ್ಷ್ಮೇಶ್ವರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಅವರ ಮೇಲಿನ ಆರೋಪ ನಿವಾರಣೆಗೆ ರಾಜೀನಾಮೆ ನೀಡದಿದ್ದಲ್ಲಿ ಕಳಂಕ ಹೊತ್ತು ಉಳಿಯುತ್ತಾರೆ. ಕಾಂಗ್ರೆಸ್ ಪಕ್ಷದ ಹಗರಣಗಳ ವಿರುದ್ಧ ಬಿಜೆಪಿ ಪಕ್ಷದಿಂದ ಬೆಂಗಳೂರನಿಂದ ಮೈಸೂರಿನವರೆಗೆ 8 ದಿನಗಳ ಕಾಲ ಎಲ್ಲರೂ ಸೇರಿ ಪಾದಯಾತ್ರೆ ಕೈಗೊಳ್ಳುತ್ತೇವೆ. ಇದರಲ್ಲಿ ಮುಡಾ ಹಗರಣ, ವಾಲ್ಮೀಕಿ ಹಗರಣ ಎಲ್ಲವನ್ನು ಪ್ರಸ್ತಾಪಿಸುತ್ತೇವೆ.

ಪಾದಯಾತ್ರೆಯಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್‌ವೈ, ಕುಮಾರಸ್ವಾಮಿ, ಬಿ.ವೈ. ವಿಜಯೇಂದ್ರ, ಆರ್.ಅಶೋಕ, ಕೇಂದ್ರ ಮಂತ್ರಿಗಳು ಸೇರಿ ಜೆ.ಡಿ.ಎಸ್., ಬಿಜೆಪಿ ಕಾರ್ಯಕರ್ತರು, ಮುಖಂಡರು ಜಂಟಿಯಾಗಿ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದೇವೆ. ಸಣ್ಣ ಪುಟ್ಟ ಸಮಸ್ಯೆಗಳು ಬಗೆಹರಿದಿವೆ.

ಈ ಸರಕಾರ ಬಂದಾಗಿನಿಂದ ನಯಾಪೈಸೆಯಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ದರೋಡೆ, ಕೊಲೆಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಎಲ್ಲ ವಿಚಾರಗಳನ್ನು ಜನರ ಮುಂದಿಡುತ್ತೇವೆ.

ಬಸನಗೌಡ ಯತ್ನಾಳ, ರಮೇಶ ಜಾರಕಿಹೊಳಿ ಇವರು ಪಾದಯಾತ್ರೆಗೆ ಸಹಮತ ನೀಡುತ್ತಾರೆ. ಸಣ್ಣ ಪುಟ್ಟ ಭಿನ್ನಾಬಿಪ್ರಾಯ ಸರಿದೂಗಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು. ಈ ವೇಳೆ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ನಿಂಬಣ್ಣ ಮಡಿವಾಳರ, ಪರಶುರಾಮ ಇಮ್ಮಡಿ, ನವೀನ ಬೆಳ್ಳಟ್ಟಿ ಇದ್ದರು.


Spread the love

LEAVE A REPLY

Please enter your comment!
Please enter your name here