HomeGadag Newsನಗರಸಭೆಯ ಆಸ್ತಿ ಉಳ್ಳವರ ಪಾಲಾಗದಿರಲಿ

ನಗರಸಭೆಯ ಆಸ್ತಿ ಉಳ್ಳವರ ಪಾಲಾಗದಿರಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರ ಸಭೆಯ ಆಧೀನದಲ್ಲಿರುವ 34 ಎಕರೆ 32 ಗುಂಟೆ ಆಸ್ತಿ ಮೇಲೆ ಬಿದ್ದಿರುವ ದೃಷ್ಟಿಯಿಂದ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಉಳ್ಳವರ ಪಾಲಾಗದಿರಲ್ಲಿ ಎಂದು ವಿಶ್ವನಾಥ ಶೀರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ನಡೆದ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಗದಗ ಶಾಸಕರು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ ವಿಧೇಯಕವನ್ನು ರಚಿಸಿ ನಗರ ಸಭೆಯ ಆಸ್ತಿಯ ಮೇಲೆ ವಿಶೇಷ ಆಸಕ್ತಿ ತೋರಿದ ಕಾರ್ಯ ಶ್ಲಾಘನೀಯ.

ಪ್ರಾಧಿಕಾರದ ಹೆಸರಿನಲ್ಲಿ ನಮೂದಾಗಿರುವ ಶಬ್ಧಗಳಗಳನ್ನು ಗಮನಿಸಿದಾಗ ನಗರ ಸಭೆ ಮಾಲೀಕತ್ವದ ಅನೇಕ ಮಳಿಗೆಗಳು ಲಭ್ಯವಿರುವುದು ಕಂಡು ಬರುತ್ತದೆ. ಸಂಸ್ಕೃತಿಗೆ ಸಂಬಂಧಿಸಿದಂತೆ ಈಗಾಗಲೇ ಕನ್ನಡ ಸಾಹಿತ್ಯ ಭವನ, ಪಂ. ಭೀಮಸೇನ ಜೋಶಿ ರಂಗಮಂದಿರ ನಿರ್ಮಾಣವಾಗಿವೆ.

ಒಟ್ಟಾರೆಯಾಗಿ ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ ಅವಶ್ಯಕತೆ ಎಷ್ಟು ಮುಖ್ಯವಾಗಿದೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸುವುದು ಅಗತ್ಯ ಮತ್ತು ನಗರ ಸಭೆಯ ಆಸ್ತಿ ಉಳ್ಳವರ ಪಾಲಾಗದೆ ಉಣ್ಣುವವರ ಪಾಲಾದರೆ ಸೂಕ್ತ ಎಂದು ಅರಿವು ಫೌಂಡೇಶನ್ ಅಧ್ಯಕ್ಷ ವಿಶ್ವನಾಥ ಶೀರಿ ಅಭಿಪ್ರಾಯಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!