HomeGadag Newsಪೋಲಿಯೊ ಹನಿ ಹಾಕಿಸಿ ಅಂಗವೈಕಲ್ಯತೆ ತಡೆಯೋಣ

ಪೋಲಿಯೊ ಹನಿ ಹಾಕಿಸಿ ಅಂಗವೈಕಲ್ಯತೆ ತಡೆಯೋಣ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಪೋಲಿಯೊ ಕಾರ್ಯಕ್ರಮದ ಅಂಗವಾಗಿ ಭಾನುವಾರ ಲಸಿಕಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, 2011ರಿಂದ ದೇಶದಲ್ಲಿ ಯಾವುದೇ ಪೋಲಿಯೊ ಪ್ರಕರಣ ಕಂಡುಬಂದಿಲ್ಲ.

ಹೀಗಾಗಿ ಭಾರತ ದೇಶವು ಪೋಲಿಯೊ ಮುಕ್ತವಾಗಿದೆ. ನಿಮ್ಮ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿ 1ರಿಂದ 5 ವರ್ಷದೂಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ ಮುಂದೆ ಬರಬಹುದಾದ ಅಂಗವಿಕಲತೆಯನ್ನು ತಡೆಯೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ವೈದ್ಯ ಮುತ್ತಣ್ಣ ಹಟ್ಟಿಮನಿ ಮಾತನಾಡಿದರು. ಸಹಾಯಕ ವೈದ್ಯರಾದ ಗಂಗಮ್ಮ ಕುಂಬಾರ, ಸುಶ್ಮಿತಾ ಪೀಟರ್, ಅಂಗನವಾಡಿ ಕಾರ್ಯಕರ್ತರಾದ ಲಕ್ಷ್ಮಿ ವ್ಹಿ.ಇದ್ಲಿ, ಶಂಕ್ರಮ್ಮ ಕೊತಬಾಳ, ವಿದ್ಯಾ ಇದ್ಲಿ, ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷ್ಮಿ ಉಂಡಿ, ಶಾರವ್ವ ಗೋಂದಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img