ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸಮೀಪದ ನೀಲಗುಂದ ಗ್ರಾಮದ ದಿವ್ಯ ಚೇತನ ಟ್ರಸ್ಟ್ ಜ್ಞಾನಗಿರಿ ಗುದ್ನೇಶ್ವರಮಠದಲ್ಲಿ ಮಾ.6ರಿಂದ 8ವರೆಗೆ ಶಿವರಾತ್ರಿ ಉತ್ಸವ ನೆರವೇರಲಿದೆ.
ಮಾ.6ರಂದು ಬೆಳಿಗ್ಗೆ 9 ಗಂಟೆಗೆ ರಂಗೋಲಿ ಸ್ಪರ್ಧೆ, ಸಾಯಂಕಾಲ 6.30ಕ್ಕೆ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಾನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರಮಾಹಾಸ್ವಾಮಿಗಳು, ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎ. ರಡ್ಡೆರ ನೆರವೇರಿಸಲಿದ್ದು, ಕೃಷ್ಣಗೌಡ ಪಾಟೀಲ್, ರಾಜು ಕುರಡಗಿ, ಬಿಇಓ ವಿ.ವಿ. ನಡುವಿನಮನಿ, ಸಿಪಿಐ ಸಂಗಮೇಶ ಶಿವಯೋಗಿ, ಉಪ ತಹಸೀಲ್ದಾರ ಎಸ್.ಬಿ.ಸಿಂಪರ್ ಭಾಗವಹಿಸುವರು.
ಮಾ.7ರ ಸಾಯಂಕಾಲ 6.30ಕ್ಕೆ ಸಂತವಾಣಿ ಕಾರ್ಯಕ್ರಮದ ಸಾನಿಧ್ಯವನ್ನು ಮುಳಗುಂದ ಗವಿಮಠದ ಡಾ.ಮಲ್ಲಿಕಾರ್ಜುನ ಮಾಹಾಸ್ವಾಮಿಜಿ, ನೇತೃತ್ವವನ್ನು ಅಣ್ಣೀಗೇರಿ ದಾಸೋಹಮಠದ ಶಿವಕುಮಾರ ಮಾಹಾಸ್ವಾಮಿಜಿ, ಧಾರವಾಡ ಮುರುಘಾಮಠದ ಸಚ್ಚಿದಾನಂದ ದೇವರು, ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ್, ಉದ್ಘಾಟಕರಾಗಿ ಗದಗ ವಿ.ಪ ಸದಸ್ಯ ಎಸ್.ವಿ. ಸಂಕನೂರ, ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯ ಮಹೇಶ ನಾಲವಾಡ, ರಾಮಣ್ಣ ಕಮಾಜಿ, ಶಿವಪ್ಪ ಕೋಳಿವಾಡ, ಫಕ್ಕೀರೇಶ ಹಿರೇಮನಿ, ಬಸವರಾಜ ಬೆಂಡಿಗೇರಿ, ಅಶೋಕ ಕತ್ತಿ, ಚಿಂಚಲಿ ಗ್ರಾ.ಪಂ.ಅಧ್ಯಕ್ಷ ದೇವಮ್ಮಾ ಬಂಗಾರಿ, ಉಪಾಧ್ಯಕ್ಷೆ ಲಲಿತಾ ಕುರಹಟ್ಟಿ ಪಾಲ್ಗೊಳ್ಳುವರು.
ಮಾ.8ರ ಸಾಯಂಕಾಲ 6.30ಕ್ಕೆ ಮಾಹಾ ಶಿವರಾತ್ರಿ ಕಾರ್ಯಕ್ರಮದ ಸಾನಿಧ್ಯವನ್ನು ಹೊಸಳ್ಳಿ ಬೂದಿಶ್ವರಮಠದ ಬೂದಿಶ್ವರ ಮಾಹಾಸ್ವಾಮಿಜಿ, ಉದ್ಘಾಟನೆಯನ್ನು ಹುಬ್ಬಳ್ಳಿಯ ಶ್ರೇಯಾ ಪ್ರಾಪರ್ಟಿ ಸಿಇಓ ಸೂರಜ ಅಳವಂಡಿ, ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್, ಎಂ.ಡಿ.ಬಟ್ಟೂರ, ಬೆಂಗಳೂರ ಡಿಐಜಿಪಿ ರವಿ ಚನ್ನಣ್ಣವರ, ಅಪ್ಪಣ್ಣಾ ಇನಾಮತಿ, ಎಸ್.ಎಂ. ನೀಲಗುಂದ, ಎಚ್.ಎಂ. ಸಿದ್ದಲಿಂಗಯ್ಯ ಪಾಲ್ಗೊಳ್ಳಲಿದ್ದು, ಗೌರಮ್ಮಾ ಬಡ್ನಿ, ವಿ.ಪಿ. ಹಿರೇಮಠ, ಎಸ್.ಎಲ್. ನೇಕಾರರನ್ನು ಸನ್ಮಾನಿಸಲಾಗುವುದು.
ರಾತ್ರಿ 9 ಗಂಟೆಗೆ ಶಿವರಾತ್ರಿ ಜಾಗರಣೆಯಲ್ಲಿ ಹುಬ್ಬಳ್ಳಿಯ ಆಶೀರ್ವಾದ ನೃತ್ಯ ಕಲಾ ಕೇಂದ್ರದ ವಿದುಷಿ ಶೈಲಾ ಕಟಗಿಯವರಿಂದ ಭರತನಾಟ್ಯ, ಶಹನಾಯ್ ವಾದನ, ಮಲ್ಲಿಕಾರ್ಜುನ ಭಜಂತ್ರಿಯವರಿಂದ ವಾಯಲಿನ್ ವಾದನ, ನಾರಾಯಣ ಹಿರೇಕೊಳಚಿ, ಮಲ್ಲಪ್ಪ ಹೊಂಗಲ ಇವರಿಂದ ಹಾಸ್ಯ ಸಂಜೆ, ಸೌಮ್ಯ ಓಸವಾಲ ತಂಡದವರಿಂದ ಸಂಗೀತ ಕಾರ್ಯಕ್ರಮ ಜರಗುವುದು ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಪ್ರಕಟಣೆಗೆ ತಿಳಿಸಿದ್ದಾರೆ.