Homecultureಧರ್ಮ ಮಾರ್ಗದೊಂದಿಗೆ ಅಲ್ಲಾನ ಕೃಪೆಗೆ ಪಾತ್ರರಾಗೋಣ

ಧರ್ಮ ಮಾರ್ಗದೊಂದಿಗೆ ಅಲ್ಲಾನ ಕೃಪೆಗೆ ಪಾತ್ರರಾಗೋಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಾಂತಿ-ಸೌಹಾರ್ದತೆಯ ಸಂಕೇತವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಗುರುವಾರ ಪಟ್ಟಣದ ಮುಕ್ತಿಮಂದಿರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಶೃದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು.

ಈ ವೇಳೆ ಮೌಲ್ವಿ ಹಾಫೀಜ್ ಮಹ್ಮದ ಶಕೀಲ್ ಮಾತನಾಡಿ, ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ ಅಲ್ಲಾನ ಸ್ಮರಣೆ ಮಾಡುವುದು ಮುಸ್ಲಿಂರ ಪವಿತ್ರ ಕರ್ತವ್ಯಗಳಲ್ಲಿ ಒಂದಾಗಿದೆ. ಧರ್ಮ ಮಾರ್ಗದಲ್ಲಿ ಸಾಗುವ ಮೂಲಕ ಅಲ್ಲಾನ ಕೃಪೆಗೆ ನಾವೆಲ್ಲ ಪಾತ್ರರಾಗೋಣ. ಬಡವರಿಗೆ, ಅಸಹಾಯಕರಿಗೆ, ದೀನರಿಗೆ ದಾನ-ಧರ್ಮ ಕಾರ್ಯ ಮಾಡುವುದು, ಸಕಲರಿಗೆ ಲೇಸನು ಬಯಸುವುದು ಇಸ್ಲಾಂ ಧರ್ಮದ ತತ್ವವಾಗಿದೆ. ದೇವರ ಪ್ರಾರ್ಥನೆ ಮಾಡುವ ಮೂಲಕ ನಮ್ಮಲ್ಲಿನ ಪಾಪ ಕರ್ಮಗಳ ಕೊಳೆಯನ್ನು ತೊಳೆದುಕೊಳ್ಳುವುದು ಅಗತ್ಯವಾಗಿದೆ ಎಂದರು.

ಮುಸ್ಲಿಂ ಸಮಾಜದ ಅನೇಕರು ಬಡವರಿಗೆ ಹಣ, ಧಾನ್ಯ, ಬಟ್ಟೆ, ಹಣ್ಣು-ಹಂಪಲಗಳನ್ನು ತಮ್ಮ ಯೋಗ್ಯತಾನುಸಾರ ದಾನ ಮಾಡಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮನೆಯಲ್ಲಿ ಹಿಂದೂ ಸ್ನೇಹಿತರು, ನೆರೆಯವರೊಂದಿಗೆ ಸೇರಿ ಊಟ ಮಾಡಿದ ಸಂಪ್ರದಾಯವು ಸಹ ಈ ರಂಜಾನ್ ಹಬ್ಬದ ವಿಶೇಷತೆಯಾಗಿ ಕಂಡು ಬಂದಿತು.

ಸಾಮೂಹಿಕ ಪ್ರಾರ್ಥನೆ ವೇಳೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮುಕ್ತಾರ್‌ಅಹ್ಮದ ಗದಗ, ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ ಕಣಕೆ, ಡಿ.ಜೆ. ಮುಚ್ಚಾಲೆ, ಎಸ್.ಕೆ. ಹವಾಲ್ದಾರ, ಅಬ್ದುಲ್‌ಕರೀಮ್ ಸೂರಣಗಿ, ಅಬ್ದುಲ್‌ಕರೀಮ್ ಕರೀಮ್‌ಖಾನವರ, ಯುನಿಸ್ ಚೌರಿ, ಪಿರ್ಧೋಸ ಆಡೂರ, ಜಾಕೀರಹುಸೇನ ಹವಾಲ್ದಾರ, ಮುಸ್ತಾಕ್ ಶಿರಹಟ್ಟಿ, ಅಬ್ಜಲ್ ರಿತ್ತಿ, ಸಾಧಿಕ ಬಿಜಾಪುರ, ಶಫಿ ಸಿದ್ದಾಪುರ, ಸಿಕಂದರ ನದಾಫ್, ಸರ್ಪರಾಜ ಸೂರಣಗಿ ಸೇರಿ ಅಪಾರ ಮುಸ್ಲಿಂ ಭಾಂಧವರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!