ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ: ಪೊಲೀಸರ ಮೊರೆ ಹೋದ ಜೋಡಿಗಳು

0
Spread the love

ವಿಜಯಪುರ: ಎದುರು ಬದುರು ಮನೆಯಲ್ಲಿದ್ದ ಅವರಿಬ್ಬರು ಪ್ರೇಮ ಹಕ್ಕಿಗಳಂತೆ ಒಂದಾಗಿದ್ದರು. ಆದ್ರೆ ಹುಡುಗಿ ಮನೆಯವರಿಗೆ ಈ ಮದುವೆ ಸುತಾರಾಂ ಇಷ್ಟವಿರಲಿಲ್ಲ. ಪ್ರೀತಿಗೆ ಮನೆಯವರು ಒಪ್ಪದೆ ಇದ್ದಾಗ ಓಡಿ ಹೋಗಿ ನಿಖಾ ಆಗಿದ್ದರು. ಆದ್ರೀಗ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದ್ದು, ರಕ್ಷಣೆಗಾಗಿ ವಿಜಯಪುರ ಎಸ್ ಪಿ ಮೊರೆ ಹೋಗಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..‌.

Advertisement

ಹೀಗೆ ಕೈ ಕೈ ಹಿಡಿದು ನಿಂತಿರೋ ಇವರ ಹೆಸರು ಇಸಾಕ್‌ ಜನ್ನಳ್ಳಿ ಹಾಗೂ ಸುಮಯ್ಯ ಡೋಣಿ ಅಂತಾ.. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೆಂಬಾವಿ ಕಾಲೋನಿ ನಿವಾಸಿಗಳು.

ಪ್ರೀತಿಸಿ ಮದುವೆಯಾಗಿರೋ ಇವರಿಗೆ ಸುಮಯ್ಯ ಡೋಣಿ ಕುಟುಂಬದಿಂದ ಜೀವ ಭಯವಿದೆಯಂತೆ. ಹೀಗಾಗಿ ನಮಗೆ ರಕ್ಷಣೆ ಬೇಕು ಅಂತಾ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ಕೂತಿದ್ದಾರೆ.

ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತಿದ್ದ ಇವರು ಕಳೆದ ಕೆಲ ದಿನಗಳ ಹಿಂದೆ ಮನೆಯಿಂದ ಓಡಿ ಬಂದು ಮುಸ್ಲಿಂ ಧರ್ಮದ ನಿಯಮಗಳಂತೆ ವಿಜಯಪುರದ ದರ್ಗಾವೊಂದರಲ್ಲಿ ನಿಖಾ ಮಾಡಿಕೊಂಡಿದ್ದಾರೆ.

ಆದರೀಗ ಮನೆಯವರಿಂದ ಬೆದರಿಕೆ ಕರೆ ಬರ್ತಿವೆಯಂತೆ, ಇಬ್ಬರನ್ನು ಮುಗಿಸಿ ಬಿಡುವುದಾಗಿ ಸುಮಯ್ಯ ಡೋಣಿ ತಂದೆ ಸೇರಿದಂತೆ ಕುಟುಂಬದವರು ಧಮ್ಕಿ ಹಾಕ್ತಿದ್ದಾರಂತೆ. ರಕ್ಷಣೆಗಾಗಿ ಎಸ್ ಪಿ ಕಚೇರಿಗೆ ಬಂದಿದ್ದಾರೆ…

ತಾಳಿಕೋಟೆಯ ಕೆಂಬಾವಿ ಕಾಲೋನಿಯಲ್ಲಿ ಇಸಾಕ್‌ ಅಜ್ಜ-ಅಜ್ಜಿ ಇರ್ತಾರೆ, ಎದುರಲ್ಲೆ ಸುಮಯ್ಯ ಮನೆ ಇದೆ. ಇಸಾಕ್‌ ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿ ಮೆಕಾನಿಕಲ್‌ ಕೆಲ್ಸಾ ಮಾಡ್ತಿದ್ದಾನೆ.

ಸುಮಯ್ಯ ಈಗಷ್ಟೇ ಬೀ ಪಾರ್ಮಸಿ ಓದು ಮುಗಿಸಿದ್ದು ಜಾಬ್‌ ಸಿಗೋವ ಭರವಸೆಯಲ್ಲಿದ್ದಾಳೆ. ಪ್ರೀತಿಗೆ ಕಣ್ಣಿಲ್ಲ ಅನ್ನೋ ಹಾಗೇ ಇಬ್ಬರ ಶಿಕ್ಷಣ, ಕೌಟುಂಬಿಕ ಹಿನ್ನಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದರು ಇಬ್ಬರು ಪ್ರೀತಿಸಿ ಈಗ ಮದುವೆಯನ್ನು ಮಾಡಿಕೊಂಡಿದ್ದಾರೆ.

ಆದ್ರೆ ತಾಳಿಕೋಟೆಯಲ್ಲಿರುವ ಸುಮಯ್ಯಾಳ ಡೋಣಿ ಕುಟುಂಬಸ್ಥರು ಶ್ರೀಮಂತರಿದ್ದು, ಪ್ರಭಾವಿಗಳಾಗಿದ್ದಾರೆ. ಸುಮಯ್ಯ ಕಿಡ್ನಾಪ್‌ ಆಗಿದೆ ಎಂದು ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರಿಂದ ಇಸಾಕ್‌ ಅಜ್ಜ-ಅಜ್ಜಿಗೆ ಟಾರ್ಚರ್ ಕೊಡಿಸ್ತಿದ್ದಾರಂತೆ…

ಸಧ್ಯ ಪ್ರೀತಿಸಿ ಮದುವೆಯಾಗಿರೋ ಇಬ್ಬರಿಗೂ ಹುಡುಗಿ ಕುಟುಂಬಸ್ಥರಿಂದ ಜೀವಭಯ ಕಾಡುತ್ತಿದೆ. ಡೋಣಿ ಕುಟುಂಬದವರು ಪ್ರಭಾವಿಗಳು ಆಗಿರೋದ್ರಿಂದ ಏನಾದ್ರೂ ಮಾಡಿ ಬಿಟ್ಟಾರು ಎನ್ನುವ ಭಯ ಹುಡುಗನ ಕುಟುಂಬಸ್ಥರಲ್ಲಿದೆ. ನಮಗೆ ನ್ಯಾಯ ಬೇಕು ಅಂತ ಎಸ್ ಪಿ ಕಚೇರಿ ಮೆಟ್ಟಿಲು ಹತ್ತಿದ್ದಾರೆ. ಈ ಸಮಸ್ಯೆ ಪೊಲೀಸರು ಹೇಗೆ ಬಗೆ ಹರಿಸುತ್ತಾರೋ ಕಾದು ನೊಡೋಣ…


Spread the love

LEAVE A REPLY

Please enter your comment!
Please enter your name here