Homecultureಕಸಾಪದಿಂದ `ಸಾಹಿತ್ಯ ಜಾಗರಣೆ'

ಕಸಾಪದಿಂದ `ಸಾಹಿತ್ಯ ಜಾಗರಣೆ’

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸಭರಿತರಾಗಿ ಶಿವರಾತ್ರಿಯಂದು ಧ್ಯಾನಿಸಬೇಕು ಎಂದು ಸಾಹಿತಿ ಎಸ್.ಎಫ್. ಆದಿ ಅಭಿಪ್ರಾಯಪಟ್ಟರು.

ಲಕ್ಷ್ಮೇಶ್ವರ ತಾಲೂಕಾ ಕಸಾಪ ವತಿಯಿಂದ ಪಟ್ಟಣದ ಬಸ್ತಿಬಣದ ಈಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ `ಸಾಹಿತ್ಯ ಜಾಗರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರಸಭೆ ಮಾಜಿ ಸದಸ್ಯ ಮಹೇಶ ಸೋಮಕ್ಕನವರ, ಹಬ್ಬ, ಸಂಪ್ರದಾಯ, ಆಚರಣೆಗಳು ಮನುಷ್ಯ ಮನುಷ್ಯರ ಮನಸ್ಸನ್ನು ಹತ್ತಿರ ತರುತ್ತವೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡುತ್ತವೆ ಎಂದರು.

ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಮಾತನಾಡಿ. ಇಂತಹ ಸ್ಥಳದಲ್ಲಿ ಮುಂದಿನ ತಲೆಮಾರಿಗೆ ಈ ಶ್ರೇಷ್ಠ ಸಂಪ್ರದಾಯ ದಾಟಿಸುವ ಜವಾಬ್ದಾರಿಯನ್ನು ತಾಲೂಕಾ ಕಸಾಪ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ ಎಂದರು.

ಉಪನ್ಯಾಸಕ ಎ.ಎನ್. ನಾವಿ, ನಾಗರಾಜ ಗುಜರಿ, ಈಶ್ವರ ಉಡುಪಿ, ಅಶೋಕ ಸೊರಟೂರ, ಮಂಜುನಾಥ ಚಾಕಲಬ್ಬಿ, ಎಸ್.ಬಿ. ಅಣ್ಣಿಗೇರಿ, ಲಕ್ಷ್ಮಣ ಮೆಡ್ಲೇರಿ, ಈಶ್ವರ ಬನ್ನಿಕೊಪ್ಪ, ಸಿದ್ದಣ್ಣ ಹಡಪದ, ತಿಪ್ಪಣ್ಣ ಹಡಪದ, ಕೊಟ್ರೇಶ ಅಳವಂಡಿ, ರವಿ ನೀರಲಗಿ, ನಾರಾಯಣಪ್ಪ ಮಹಾಬಲೇಶ್ವರ ಮುಂತಾದವರು ಜಾಗರಣೆಯಲ್ಲಿ ಪಾಲ್ಗೊಂಡಿದ್ದರು. ಗುರು ಪುತ್ರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಶ್ವಿನಿ ಚೌದರಿ, ಚೇತನಾ, ಅಮೃತಾ, ನಮ್ರತಾ, ಮೇಘನಾ, ಸಂಜನಾ, ಸುನಿಲ್, ಅನಿಲ್ ಮುಂತಾದವರು ಜಾಗರಣ ಗೀತಗಾಯನ ನಡೆಸಿಕೊಟ್ಟರು. ಶಿವರಾಜ ಗುಜರಿ, ನಾಗರಾಜ ಮಜ್ಜಿಗುಡ್ಡ, ಮಂಜುನಾಥ ಚೌದರಿ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!